೨೬ರಂದು ಭಾರತ ಬಂದ್‌:ಎಐಟಿಡಬ್ಲ್ಯುಎ ಬೆಂಬಲ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವಿರುದ್ಧ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಫೆ.26ರಂದು ಕರೆ ನೀಡಿರುವ ಭಾರತ ಬಂದ್‍ಗೆ ಆಲ್ ಇಂಡಿಯಾ ಟ್ರಾನ್ಸ್ಪೋಟರ್ಸ್ ವೆಲ್ಫೇರ್ ಅಸೋಸಿಯೇಶನ್ (ಎಐಟಿಡಬ್ಲ್ಯುಎ) ಬೆಂಬಲ ನೀಡಿದೆ.
ಇಂಧನ ದರ ಏರಿಕೆ ಮತ್ತು ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಇ-ವೇ ಬಿಲ್ ಕಾನೂನುಗಳ ವಿರುದ್ಧ ಒಂದು ದಿನದ ಸಾರಿಗೆ ಅಸಹಕಾರಕ್ಕೆ ಎಲ್ಲ ರಾಜ್ಯಮಟ್ಟದ ಸಾರಿಗೆ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ.
ಈ ಅಸಹಕಾರವು ಎಲ್ಲ ಬುಕ್ಕಿಂಗ್ ತಿರಸ್ಕರಿಸುವುದು ಮತ್ತು ಇ-ಬಿಲ್ ಕೇಂದ್ರಿತ ಸರಕುಗಳ ಸಾಗಾಣಿಕೆಯನ್ನು ಒಂದು ದಿನ ತಿರಸ್ಕರಿಸುವುದಾಗಿರುತ್ತದೆ. ಎಲ್ಲ ಸಾರಿಗೆ ಕಂಪನಿಗಳು ಸಾಂಕೇತಿಕ ಪ್ರತಿಭಟನಾರ್ಥವಾಗಿ ಬೆಳಿಗ್ಗೆ 6ರಿಂದ ರಾತ್ರಿ 8ರ ವರೆಗೆ ಟ್ರಕ್‍ಗಳನ್ನು ನಿಲ್ಲಿಸಲು ಕೋರಲಾಗಿದೆ. ಫೆ.26ರಂದು ಯಾವುದೇ ಸರಕು ಸಾಗಾಣಿಕೆ ಬುಕ್ಕಿಂಗ್ ಮಾಡದಂತೆ ಅಥವಾ ಲೋಡ್ ಮಾಡದಂತೆ ಎಲ್ಲ ಗ್ರಾಹಕರಿಗೆ ಸಾರಿಗೆ ಕಂಪನಿಗಳು ಮನವಿ ಮಾಡಿಕೊಳ್ಳಲಿವೆ ಎಂದು ಎಐಟಿಡಬ್ಲ್ಯುಎ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಆರ್ಯ ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಶಿವಮೊಗ್ಗ ಕಲ್ಲು ತೂರಾಟದ ಘಟನೆ: 24 ಎಫ್‌ಐಆರ್‌ ದಾಖಲು, 60 ಮಂದಿ ಅರೆಸ್ಟ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement