ನವದೆಹಲಿ: ಸಿಲಾಂಪುರದಲ್ಲಿ ನಡೆದ ಎಎಪಿ ರೋಡ್ ಶೋದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಾಂಗ್ರೆಸ್ ಪಕ್ಷ ಬಿಜೆಪಿಯ “ಬಿʼ ಟೀಮ್ ಎಂದು ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ದೇಶಾದ್ಯಂತ ನಾಶವಾಗುತ್ತಿದೆ. ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ ಎಂಬುದು ಸೂರತ್ ಸ್ಥಳಿಯ ಸಂಸ್ಥೆಯ ಚುನಾವಣೆಯಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಸೂರತ್ ಮಹಾನಗರ ಪಾಲಿಕೆಯ 120 ಸ್ಥಾನಗಳಲ್ಲಿ ಎಎಪಿ 27 ಸ್ಥಾನಗಳನ್ನು ಗಳಿಸಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ದೇಶದಲ್ಲಿ ಎಎಪಿ ಮಾತ್ರ ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿದೆ. ದೇಶದಲ್ಲಿ ಬಿಜೆಪಿಗೆ ಸವಾಲು ಹಾಕುವ ಒಂದು ಪಕ್ಷ ಇದ್ದರೆ ಅದು ಎಎಪಿ ಮಾತ್ರ. ಬಿಜೆಪಿಯ ಮುಂದೆ ಕಾಂಗ್ರೆಸ್ ಮಂಡಿಯೂರಿದೆ. ಒಂದು ರೀತಿಯಲ್ಲಿ ಕಾಂಗ್ರೆಸ್ ಬಿಜೆಪಿಯ ಬಿ ತಂಡವಾಗಿದೆ ಎಂದರು.
ದೆಹಲಿಯಲ್ಲಿ ಎಎಪಿ ಮೂರು ಬಾರಿ ಸರ್ಕಾರವನ್ನು ರಚಿಸಿದೆ, 2013, 2015 ಮತ್ತು 2020 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಸೋಲಿಸಿತು. ಇದರಿಂದ ದೇಶದ ಜನರು ದಿಗ್ಭ್ರಮೆಗೊಂಡಿದ್ದಾರೆ ಎಂದು ಹೇಳಿದರು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ