ರೈತ ಹೋರಾಟಗಾರ್ತಿ ನವ್‌ದೀಪ‌ ಕೌರ್‌ಗೆ ಜಾಮೀನು

ರೈತ ಹೋರಾಟಗಾರ್ತಿ ನವ್ದೀಪ್‌ ಕೌರ್‌ಗೆ ಪಂಜಾಬ್‌ ಮತ್ತು ಹರಿಯಾಣ ಉಚ್ಚ ನ್ಯಾಯಾಲಯ ಜಾಮೀನು ನೀಡಿದೆ.
ಈ ವರ್ಷದ ಆರಂಭದಲ್ಲಿ ದೆಹಲಿಯ ಗಡಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ೨೩ರ ಹರೆಯದ ನವದೀಪ್‌ ಕೌರ್‌ ಅವರನ್ನು ಬಂಧಿಸಲಾಗಿತ್ತು. ನದೀಪ್‌ ಕೊಲೆ ಯತ್ನ ಹಾಗೂ ಸುಲಿಗೆಯ ಆರೋಪ ಎದುರಿಸುತ್ತಿದ್ದಾರೆ. ಸೋನಿಪತ್‌ನ ಕೈಗಾರಿಕಾ ಘಟಕಕ್ಕೆ ಮುತ್ತಿಗೆ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪವನ್ನು ನವ್ದೀಪ್‌ ಎದುರಿಸುತ್ತಿದ್ದಾರೆ. ದಂಗೆಯನ್ನು ತಡೆಯಲು ಪೊಲೀಸರು ಸ್ಥಳಕ್ಕೆ ಬಂದಾಗ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿತ್ತು.
ಕಳೆದ ಕೆಲವು ವಾರಗಳಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ಪ್ರಸಿದ್ಧ ವ್ಯಕ್ತಿಗಳು ಆಕೆಯ ಬಿಡುಗಡೆಗಾಗಿ ಒತ್ತಡ ಹೇರಿದ್ದರು. ಒಂಟಾರಿಯೊ ಶಾಸಕಾಂಗದಲ್ಲಿ ಕೆನಡಾದ ಶಾಸಕ ಗುರಾತನ್ ಸಿಂಗ್, ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರ ಸೋದರ ಸೊಸೆ ಮೀನಾ ಕೂಡ ನದೀಪ್‌ರನ್ನು ಬಿಡುಗಡೆ ಮಾಡುವಂತೆ ಪದೇ ಪದೇ ಟ್ವೀಟ್‌ ಮಾಡಿದ್ದರು. ಕೌರ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಚಿತ್ರಹಿಂಸೆ ಮತ್ತು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬಂಧಿತ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಎಎಪಿ ಸಂಸದ ಹರ್ಪಾಲ್ ಸಿಂಗ್ ಚೀಮಾ ಅವರು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ಗೆ ಪತ್ರ ಬರೆದಿದ್ದರು.

ಪ್ರಮುಖ ಸುದ್ದಿ :-   ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ : ಅಪ್ರಾಪ್ತ ಆರೋಪಿಯ ಜಾಮೀನು ರದ್ದುಗೊಳಿಸಿದ ಬಾಲಾಪರಾಧಿ ನ್ಯಾಯಾಲಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement