೨೮ರಂದು ಎರಡು ಕೃತಿಗಳು ಬಿಡುಗಡೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಮೇಲನಗಂಟಿಗೆ ಶ್ರೀಧರಾನುಗ್ರಹದಲ್ಲಿ ಫೆ.೨೮ರಂದು ರವಿವಾರ ಮಧ್ಯಾಹ್ನ 3 ಗಂಟೆಗೆ ಅವರ ಕೃತಿಗಳಾದ ನಿತ್ಯಗಾಮಿನಿ ಹಾಗೂ ೨೨ನೇ ಕೃತಿ ನನಗೊಂದು ಭಾಷಣ ಬರೆದುಕೊಡ್ತೀರಾ ಟೀಚರ್‌ ಬಿಡುಗಡೆ ಕಾರ್ಯಕ್ರಮ ಭರವಸೆಯ ಬೆನ್ನೇರಿ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಆಳ್ವಾಸ್ ಮೂಡುಬಿದರೆ ಸಂಗೀತ ಶಿಕ್ಷಕರಾಗಿರುವ ಚಿನ್ಮಯ ಭಟ್ಟ ಸಂಯೋಜನೆಯಲ್ಲಿ ಮಾಘ ಗಾನೋತ್ಸವ ಸಂಪನ್ನಗೊಳ್ಳಲಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಗೀತ ಕಲಾವಿದರ ಬಹಳ ಅಪರೂಪದ ಗಾಯನ,ಅರಳು ಪ್ರತಿಭೆಯ ಚಂಡೆಯ ವಾದನ, ಗಿಟಾರ್ ಹೀಗೆ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಸಾಕ್ಷಿಯಾಗಲಿದೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement