ಪರಿಸರ ಸ್ನೇಹಿ ಆಟಿಕೆಗಳ ತಯಾರಿಕೆ ಹೆಚ್ಚಾಗಲಿ: ಮೋದಿ

ಆಟಿಕೆ ತಯಾರಕರು ಕಡಿಮೆ ಪ್ಲಾಸ್ಟಿಕ್‌ ಮತ್ತು ಪರಿಸರ ಸ್ನೇಹಿ ಸಾಮಗ್ರಿಗಳನ್ನು ಹೆಚ್ಚಾಗಿ ಬಳಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೊದಲ ಭಾರತ ಟಾಯ್ ಫೇರ್ 2021 ಅನ್ನು ಉದ್ಘಾಟಿಸಿದ ಅವರು, ನಾವು ಆಟಿಕೆ ಕ್ಷೇತ್ರದಲ್ಲಿ ಆತ್ಮನಿರ್ಭರ್ ಆಗಬೇಕು ಮತ್ತು ಜಾಗತಿಕ ಮಾರುಕಟ್ಟೆಗೂ ಸಹ ಪೂರೈಸಬೇಕು. 100 ಬಿಲಿಯನ್ ಯುಎಸ್‌ ಡಾಲರ್‌ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ತೀರಾ ಕಡಿಮೆ ಇದ್ದು, ದೇಶದಲ್ಲಿ ಮಾರಾಟವಾಗುವ ಆಟಿಕೆಗಳಲ್ಲಿ ಶೇಕಡಾ 85 ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಕೈಯಿಂದ ಆಟಿಕೆ ತಯಾರಿಸುವಿಕೆಯನ್ನು ಉತ್ತೇಜಿಸಬೇಕಾಗಿದೆ. ಚೆನ್ನಪಟ್ಟಣ, ವಾರಣಾಸಿ ಮತ್ತು ಜೈಪುರದ ಸಾಂಪ್ರದಾಯಿಕ ಆಟಿಕೆ ತಯಾರಕರೊಂದಿಗೆ ಸಂವಹನ ನಡೆಸಿದ ಅವರು, ಮಕ್ಕಳ ಬದಲಾಗುತ್ತಿರುವ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಸಾಂಪ್ರದಾಯಿಕ ಆಟಿಕೆಗಳನ್ನು ಹೆಚ್ಚು ಪ್ರಸ್ತುತಪಡಿಸುವಂತೆ ಮತ್ತು ಹೊಸ ಆಟಿಕೆಗಳನ್ನು ತಯಾರು ಮಾಡುವಂತೆ ಅವರಿಗೆ ಸೂಚಿಸಿದರು.
ದೇಶೀಯ ಆಟಿಕೆ ಉದ್ಯಮವನ್ನು ಸ್ಪರ್ಧಾತ್ಮಕವಾಗಿಸುವ ಉದ್ದೇಶದಿಂದ 15 ಸಚಿವಾಲಯಗಳನ್ನು ಒಳಗೊಳ್ಳುವ ಮೂಲಕ ಸರ್ಕಾರ ರಾಷ್ಟ್ರೀಯ ಆಟಿಕೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಭಾರತೀಯ ಆಟಿಕೆ ಉದ್ಯಮವು ಸಂಪ್ರದಾಯ, ತಂತ್ರಜ್ಞಾನ, ಪರಿಕಲ್ಪನೆಗಳು ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 'ನ್ಯಾಯ' ವಿಷಯದ ಹೊಸ ಪ್ರಚಾರ ಗೀತೆ ಬಿಡುಗಡೆ ಮಾಡಿದ ಕಾಂಗ್ರೆಸ್‌ | ವೀಡಿಯೊ ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement