ಚಹಾ ಮಾರುತ್ತಿದ್ದ ಬಗ್ಗೆ ಮುಚ್ಚುಮರೆ ಮಾಡದ ಪ್ರಧಾನಿ ಮೋದಿ: ಆಝಾದ್ ಶ್ಲಾಘನೆ

ಪ್ರಮುಖ ಪಕ್ಷವೊಂದರ ಮುಖಂಡನಾಗಿದ್ದರೂ ತನ್ನ ಭೂತಕಾಲದ ಜೀವನದ ಬಗ್ಗೆ ಮುಚ್ಚುಮರೆ ಮಾಡದ ಮಾದರಿ ವ್ಯಕ್ತಿ ಪ್ರಧಾನಿ ಮೋದಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಶ್ಲಾಘಿಸಿದ್ದಾರೆ.
ಜಮ್ಮುವಿನ ಗುಜ್ಜರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ನಾಯಕರ ಹಲವು ಗುಣಗಳನ್ನು ನಾನು ಮೆಚ್ಚುತ್ತೇನೆ. ನಾನು ಕೂಡಾ ಹಳ್ಳಿಯಿಂದ ಬಂದಿದ್ದು ಇದರ ಬಗ್ಗೆ ನನಗೆ ಹೆಮ್ಮೆಯಿದೆ. ನರೇಂದ್ರ ಮೋದಿಯವರೂ ತಾವು ಹಳ್ಳಿಯಿಂದ ಬಂದಿರುವುದಾಗಿ , ಚಹಾ ಮಾರುತ್ತಿದ್ದ್ದುದಾಗಿ ಹೇಳಿದ್ದಾರೆ. ರಾಜಕೀಯವಾಗಿ ನಾವು ವಿರೋಧಿಗಳಾಗಿರಬಹುದು, ಆದರೆ ಅವರು ತನ್ನ ಭೂತಕಾಲದ ವಾಸ್ತವವನ್ನು ಮರೆಮಾಚಿಲ್ಲ . ಭೂತಕಾಲದ ಬದುಕನ್ನು ಮರೆಮಾಚುವವರು ಭ್ರಮಾಲೋಕದಲ್ಲಿ ಜೀವಿಸುತ್ತಾರೆ ‘ ಎಂದು ಆಝಾದ್ ಹೇಳಿದರು.
ತಾನು ಏನಾಗಿದ್ದೇನೋ ಆ ಬಗ್ಗೆ ವ್ಯಕ್ತಿ ಹೆಮ್ಮೆ ಪಟ್ಟುಕೊಳ್ಳಬೇಕು. ನಾನು ಹಲವು ದೇಶಗಳಿಗೆ ಪ್ರವಾಸ ಹೋಗಿದ್ದೇನೆ ಮತ್ತು ಅಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದೇನೆ. ಆದರೆ ನನ್ನ ಹಳ್ಳಿಗೆ ಹೋದಾಗ ಅಲ್ಲಿಯ ಮಣ್ಣಿನ ವಾಸನೆಯೇ ಅದ್ಭುತವಾಗಿದೆ. ಇದೊಂದು ವಿಭಿನ್ನ ಪರಿಮಳ’ ಎಂದು ಆಝಾದ್ ಹೇಳಿದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

ಇಂದಿನ ಪ್ರಮುಖ ಸುದ್ದಿ :-   ರಾಹುಲ್ ಗಾಂಧಿಯವರ ಸಾವರ್ಕರ್ ಹೇಳಿಕೆ ನಂತರ ಕಾಂಗ್ರೆಸ್ ಸಭೆಗೆ ಗೈರಾಗಲು ಶಿವಸೇನೆ ಉದ್ಧವ್ ಠಾಕ್ರೆ ಬಣದ ನಿರ್ಧಾರ

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement