ನಟ ಅಮಿತಾಭ ಬಚ್ಚನ್‌ಗೆ ಶಸ್ತ್ರಚಿಕಿತ್ಸೆ

ಮುಂಬೈ: ಬಾಲಿವುಡ್‌ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಈ ಕುರಿತು ಸ್ವತಃ ಅಮಿತಾಬ್ ಬಚ್ಚನ್ ಅವರು ಟ್ವೀಟ್ ಮಾಡಿದ್ದು, ‘ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಯವಾಗಿದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿದೆ. ಟ್ವೀಟ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾರೆ. 78 ವರ್ಷದ ಅಮಿತಾಬ್ ಬಚ್ಚನ್ ಇತ್ತೀಚೆಗೆ ಕೋವಿಡ್‌ಗಾಗಿ ಹಲವು ದಿನಗಳವರೆಗೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದು ಮತ್ತೆ ಚಿತ್ರೀಕರಣಗಳಲ್ಲಿ ಪಾಲ್ಗೊಂಡಿದ್ದರು. ವಿಕಾಸ್‌ ಬಾಹ್ಲ್‌ ನಿರ್ದೇಶನದ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವುದಾಗಿ ಇತ್ತೀಚಿಗೆ ಬಿಗ್‌ಬಿ ಮಾಹಿತಿ ನೀಡಿದ್ದರು.
ಕಳೆದ ವರ್ಷ ಬಚ್ಚನ್ ಕುಟುಂಬದ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಮತ್ತು 9 ವರ್ಷದ ಮೊಮ್ಮಗಳು ಆರಾಧ್ಯಾ ಜುಲೈನಲ್ಲಿ ಕೋವಿಡ್-19 ಸೋಂಕಿಗೆ ತುತ್ತಾಗಿರುವುದಾಗಿ ಹೇಳಿದ್ದರು.
ಅಮಿತಾಬ್‌ ಅಭಿನಯದ ಚೆಹರೆ ಚಿತ್ರ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದ್ದರೆ, ಕ್ರೀಡಾ ಕಥೆಯನ್ನು ಆಧರಿಸಿದ ‘ಝುಂಡ್‌’ ಸಿನಿಮಾ ಜೂನ್‌ 18ರಂದು ತೆರೆಗೆ ಬರಲಿದೆ.

ಪ್ರಮುಖ ಸುದ್ದಿ :-   ಅನಂತ ಅಂಬಾನಿ-ರಾಧಿಕಾ ಮರ್ಚಂಟ್‌ ಅದ್ಧೂರಿ ವಿವಾಹ ಪೂರ್ವ ಕಾರ್ಯಕ್ರಮ : ಪಾಪ್‌ ಐಕಾನ್‌ ರಿಹಾನ್ನಾ ಪಡೆಯುವ ಸಂಭಾವನೆ ಕೇಳಿದ್ರೆ ದಂಗಾಗ್ತೀರಾ..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement