ಬ್ರಿಟೀಷರನ್ನೇ ಓಡಿಸಿದ್ದೇವೆ ಮೋದಿ ಯಾವ ಲೆಕ್ಕ: ರಾಹುಲ್‌ ಗಾಂಧಿ

ಬ್ರಿಟೀಷರನ್ನೇ ಸೋಲಿಸಿದ್ದೇವೆ ಇನ್ನು ನರೇಂದ್ರ ಮೋದಿ ಯಾವ ಲೆಕ್ಕ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಿರುನಲ್ವೇಲಿಯಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಣದ ಪ್ರಭಾವ ಬಳಸಿ ದೇಶವನ್ನು ನಿಯಂತ್ರಿಸಲು ಹಾಗೂ ವಿರೋಧಿಗಳನ್ನು ಹಣಿಯಲು ಪ್ರಯತ್ನಿಸುತ್ತಿರುವವರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ನಾವು ಈ ಹಿಂದೆಯೂ ಇಂಥ ಕೆಲಸ ಮಾಡಿದ್ದೇವೆ. ಬ್ರಿಟೀಷರನ್ನು ಮಣಿಸಿದ್ದೇವೆ. ಎ ಬ್ರಿಟೀಷರು ಮೋದಿಗಿಂತ ಹೆಚ್ಚಿನ ಶಕ್ತಿಶಾಲಿಗಳಾಗಿದ್ದರು. ಬ್ರಿಟೀಷರೊಂದಿಗೆ ಹೋಲಿಕೆ ಮಾಡಿದರೆ ಮೋದಿ ಏನೂ ಅಲ್ಲ ಎಂದಿದ್ದಾರೆ.
ದೇಶದ ಜನ ಅಂಥ ಬ್ರಿಟೀಷರನ್ನೇ ಓಡಿಸಿದ್ದಾರೆ. ಇನ್ನು ನರೇಂದ್ರ ಮೋದಿ ಯಾವ ಲೆಕ್ಕ? ಬ್ರಿಟೀಷರನ್ನು ಓಡಿಸಿದ ಹಾಗೆಯೇ ನರೇಂದ್ರ ಮೋದಿಯನ್ನು ನಾಗಪುರಕ್ಕೆ ಓಡಿಸಬೇಕಿದೆ ಎಂದು ಗುಡುಗಿದರು.
ಅಲ್ಲದೇ ಈ ಪ್ರಕ್ರಿಯೆಯನ್ನು ನಾವು ದ್ವೇಷ, ಕೋಪ ಹಾಗೂ ಹಿಂಸೆಯಿಂದ ಮಾಡುವುದಿಲ್ಲ ಎಂದ ರಾಹುಲ್‌ ಗಾಂಧಿ, ಅವರು ತಮಗೆ ತೋಚಿದ್ದನ್ನು ಮಾಡಲಿ. ಅವರು ನಮ್ಮನ್ನು ಹೀಯಾಳಿಸಬಹುದು, ಹಿಂಸಿಸಬಹುದು, ನಮ್ಮ ಮುಖಕ್ಕೆ ಉಗುಳಬಹುದು. ಆದರೆ ನಾವು ಅಂಥ ಕೆಲಸ ಮಾಡಬಾರದು ಎಂದು ಹೇಳಿದರು.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/
ಓದಿರಿ :-   ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು, ಯಶ್ವಂತ ಸಿನ್ಹಾ ನಾಮಪತ್ರ ಕ್ರಮಬದ್ಧ, 107 ನಾಮಪತ್ರ ತಿರಸ್ಕೃತ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ