ಡ್ರಗ್ಸ್‌ ಪ್ರಕರಣದ ಹಿಂದೆ ನನ್ನ ಸಿಲುಕಿಸಲು ಮಮತಾ ಅಳಿಯ ಅಭಿಷೇಕ, ಪೊಲೀಸ್‌ ಅಧಿಕಾರಿ ಶರ್ಮಾ ಸಂಚು: ರಾಕೇಶ ಸಿಂಗ್‌

ಕೊಲ್ಕತ್ತಾ: ಕೊಕೇನ್ ಪ್ರಕರಣದ ಆರೋಪಿ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಅವರನ್ನು ಮಾರ್ಚ್ 9 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಸೋಮವಾರ ಅಲಿಪೋರ್ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ಹಾಜರಾದ ಬಿಜೆಪಿ ನಾಯಕ ಮತ್ತು ಅವರ ಆಪ್ತರಿಗೆ ಮಾರ್ಚ್ 9 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿ ಆದೇಶಿಸಿದೆ.
ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಇದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಪೊಲೀಸ್ ಅಧಿಕಾರಿ ಮುರಲಿಧರ ಶರ್ಮಾ ಅವರ ತಂತ್ರ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯ ಸೋದರಳಿಯ ಮತ್ತು ಮುರಲಿಧರ್ ಶರ್ಮಾ ನನ್ನ ವಿರುದ್ಧ ಸಂಚು ಹೂಡಿದ್ದರು. ಸತ್ಯ ಶೀಘ್ರದಲ್ಲೇ ಹೊರಬರಲಿದೆ. ನನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದವರನ್ನು ಸಹ ಪೊಲೀಸರು ಬಂಧಿಸಿದ್ದಾರೆ” ಎಂದು ಸಿಂಗ್ ಹೇಳಿದರು.
ಪಶ್ಚಿಮ ಬಂಗಾಳದ ಬಿಜೆಪಿ ಯುವ ವಿಭಾಗದ ಮುಖಂಡರಾದ ಪಮೇಲಾ ಗೋಸ್ವಾಮಿ ಅವರ ಕಾರು ಮತ್ತು ಕೈಚೀಲದಲ್ಲಿ ಲಕ್ಷ ರೂಪಾಯಿ ಮೌಲ್ಯದ ಕೊಕೇನ್ ಪತ್ತೆಯಾಗಿದ್ದರಿಂದ ಅವರನ್ನು ನ್ಯೂ ಅಲಿಪೋರ್ ಪ್ರದೇಶದ ಪೊಲೀಸರು ಬಂಧಿಸಿದ್ದರು.
ಫೆಬ್ರವರಿ 20ರಂದು ಬಂಧನಕ್ಕೊಳಗಾದ ಗೋಸ್ವಾಮಿ, ಬಿಜೆಪಿ ಪಶ್ಚಿಮ ಬಂಗಾಳದ ವೀಕ್ಷಕ ಕೈಲಾಶ್ ವಿಜಯವರ್ಗಿಯಾ ಅವರ ಆಪ್ತ ಸಹಾಯಕ ರಾಕೇಶ್ ಸಿಂಗ್ ತಮ್ಮ ವಿರುದ್ಧ ಸಂಚು ರೂಪಿಸಿದ್ದರು ಎಂದು ಹೇಳಿದ್ದಾರೆ. ರಾಕೇಶ್ ಸಿಂಗ್ ಅವರನ್ನು ಫೆಬ್ರವರಿ 25 ರಂದು ಪೂರ್ವ ಬುರ್ದ್ವಾನ್ ಜಿಲ್ಲೆಯ ಗಾಲ್ಸಿ ಪ್ರದೇಶದಿಂದ ಪೊಲೀಸರು ರಾಜ್ಯದಿಂದ ಪರಾರಿಯಾಗಲು ಯತ್ನಿಸಿದಾಗ ಬಂಧಿಸಿದ್ದಾಗಿ ಹೇಳಿದ್ದರು.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement