ನೀವು ಮಕ್ಕಳನ್ನು ಹೆತ್ತರೆ ಸರ್ಕಾರ ಅವರ ಶಿಕ್ಷಣ ಶುಲ್ಕ ಭರಿಸಬೇಕಾ?:ಉತ್ತರ ಪ್ರದೇಶದ ಬಿಜೆಪಿ ಶಾಸಕನ ಪ್ರಶ್ನೆ

ಖಾಸಗಿ ಶಾಲೆಯಲ್ಲಿ ಕಲಿಯುವ ಮಕ್ಕಳ ಶುಲ್ಕವನ್ನು ಮನ್ನಾ ಮಾಡುವಂತೆ ಕೋರಿದ ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಬಿಜೆಪಿ ಶಾಸಕ ರಮೇಶ ದಿವಾಕರ, ನೀವು ಮಕ್ಕಳನ್ನು ಹೆತ್ತು ಸರಕಾರ ಶಿಕ್ಷಣ ವೆಚ್ಚ ಭರಿಸಬೇಕೆಂದು ನಿರೀಕ್ಷಿಸುತ್ತೀರಾ? ಎಂದು ಕೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ನೀವು ಮಕ್ಕಳನ್ನು ಮಾಡಿಕೊಳ್ಳುತ್ತೀರಿ. ಸರಕಾರ ಅವರ ಶಿಕ್ಷಣವನ್ನು ಭರಿಸಬೇಕೆಂದರೆ ಹೇಗೆ ಎಂದು ಅವರು ಮಹಿಳೆಯರನ್ನು ಪ್ರಶ್ನಿಸಿದರು. ಸರಕಾರಿ ಶಾಲೆಗಳಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. ನೀವು ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲೇಕೆ ಸೇರಿಸುವುದಿಲ್ಲ ಎಂದು ಕೇಳಿದರು. ಶಾಸಕ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
ಶಾಸಕರ ಹೇಳಿಕೆಯನ್ನು ಸಮಾಜವಾದಿ ಪಕ್ಷ ಖಂಡಿಸಿದ್ದು, ಇದು ಬಿಜೆಪಿಯ ಮಹಿಳಾ ವಿರೋಧಿ ನೀತಿಯನ್ನು ಬಿಂಬಿಸುತ್ತದೆ. ಬಿಜೆಪಿ ಮುಖಂಡರಿಗೆ ಮಹಿಳೆಯರ ಬಗ್ಗೆ ಸ್ವಲ್ಪವೂ ಗೌರವವಿಲ್ಲ ಎಂದು ಸಮಾಜವಾದಿ ನಾಯಕರೊಬ್ಬರು ಹೇಳಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ಮೂಡ್ ಆಫ್ ನೇಷನ್ ಸಮೀಕ್ಷೆ: 2024ರಲ್ಲಿಯೂ ಮೋದಿಯೇ ಪ್ರಧಾನಿಯಾಗಬೇಕೆಂದು ಅರ್ಧಕ್ಕಿಂತ ಹೆಚ್ಚು ಜನರ ಒಲವು; ಸಿಎಂಗಳಲ್ಲಿ ನವೀನ್‌ ಪಟ್ನಾಯಕ್‌ ಬೆಸ್ಟ್‌

ನಿಮ್ಮ ಕಾಮೆಂಟ್ ಬರೆಯಿರಿ

advertisement