ಪಂಜಾಬ್‌ ಸಿಎಂ ರಾಜಕೀಯ ವಿಶ್ಲೇಷಕರಾಗಿ ಪ್ರಶಾಂತ ಕಿಶೋರ್‌ ನೇಮಕ

ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ರಾಜಕೀಯ ವಿಶ್ಲೇಷಕರಾಗಿ ನೇಮಿಸಲಾಗಿದೆ.
ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಇದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು “ಪ್ರಶಾಂತ್ ಕಿಶೋರ್ ನನ್ನ ಪ್ರಧಾನ ಸಲಹೆಗಾರರಾಗಿ ನನ್ನೊಂದಿಗೆ ಸೇರಿಕೊಂಡಿದ್ದಾರೆ. ಪಂಜಾಬ್ ಜನರ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತೇನೆ” ಎಂದು ಬರೆದಿದ್ದಾರೆ.
ತಂತ್ರಜ್ಞನನ್ನು 2017 ರ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಮತ್ತು ಪಂಜಾಬ್ ಕಾಂಗ್ರೆಸ್ ನೇಮಕ ಮಾಡಿತ್ತು. ಮತ್ತು ಪ್ರಶಾಂತ ಕಿಶೋರ್‌ ಅವರು ಕಾಂಗ್ರೆಸ್‌ ಬಹುಮತ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ, ಕಿಶೋರ್ ಅವರನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತೊಡಗಿಸಿಕೊಂಡಿದೆ. ಪಶ್ಚಿಮ ಬಂಗಾಳ ಚುನಾವಣೆಯ ನಂತರ ಅವರು ಪಂಜಾಬ್ ಬಗ್ಗೆ ಗಮನ ಹರಿಸುವ ನಿರೀಕ್ಷೆಯಿದೆ.

 

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement