ಬೆಂಗಳೂರು ವಿಮಾನ ನಿಲ್ದಾಣದಲ್ಲಿ ೨.೮೦ ಕೋಟಿ ರೂ.ಮೌಲ್ಯದ ಐ ಫೋನ್‌ಗಳು ವಶಕ್ಕೆ

posted in: ರಾಜ್ಯ | 0

ಬೆಂಗಳೂರು: ಭಾರತಕ್ಕೆ ಐಫೋನ್‍ಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ದಂಪತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಅವರಿಂದ 2.8 ಕೋಟಿ ರೂ. ಮೌಲ್ಯದ 206 ಮೊಬೈಲ್‍ಗಳನ್ನು ವಶಪಡಿಸಿಳ್ಳಲಾಗಿದೆ. 49 ವರ್ಷದ ಪತಿ, 38 ವರ್ಷದ ಪತ್ನಿ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಿದಾಗ ಲಗೇಜ್‍ನಲ್ಲಿ ದುಬಾರಿ ಮೌಲ್ಯದ ಫೋನ್‍ಗಳನ್ನು ಅಕ್ರಮವಾಗಿ ತಂದಿದ್ದು ಪತ್ತೆಯಾಗಿದೆ.
ಐಫೋನ್-12 ಪ್ರೊ ಮತ್ತು ಪ್ರೊಮ್ಯಾಕ್ಸ್ ಶ್ರೇಣಿಯ 206 ಮೊಬೈಲ್‍ಗಳನ್ನು ದಂಪತಿಯಿಂದ ವಶಪಡಿಸಿಕೊಳ್ಳಲಾಗಿದೆ. ಕಳೆದ ಫೆ.13ರಂದು ಫ್ರಾನ್ಸ್ ತೊರೆದ ಈ ದಂಪತಿ ಮುಂಬೈಗೆ ಬಂದಿದ್ದರು. ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದಲ್ಲಿ ವಾಸ ಇರುವ ಇವರ ಬಳಿ ಸುಮಾರು 37ಕ್ಕೂ ಹೆಚ್ಚು ವಿವಿಧ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‍ಗಳು ಲಭ್ಯವಾಗಿದೆ. ವಶಪಡಿಸಿಕೊಳ್ಳಲಾದ ಫೋನ್‍ಗಳ ಮೌಲ್ಯ 2,74,19,400 ರೂ.ಗಳೆಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶದಿಂದ ಐಷರಾಮಿ ಮೊಬೈಲ್‍ಫೋನ್‍ಗಳನ್ನು ತಂದು ಮಾರಾಟ ಮಾಡುವ ಜಾಲದೊಂದಿಗೆ ಈ ದಂಪತಿ ಕೈ ಜೋಡಿಸಿರುವ ಶಂಕೆ ವ್ಯಕ್ತವಾಗಿದೆ. ಭಾನುವಾರ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಮಾ.12ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ರಾಜ್ಯದಲ್ಲಿ ಏರುತ್ತಿರುವ ಕೊರೊನಾ ಸೋಂಕು

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement