ಜೆಡಿಎಸ್‌ ನಂಬಿಕೆಗೆ ಅರ್ಹ ಪಕ್ಷವಲ್ಲ

ಮೈಸೂರು : ಜೆಡಿಎಸ್ ಗೆ ಶಕ್ತಿ ತುಂಬಿದರೆ ನಮಗೇ ಮಾರಕ, ಯಾಕೆಂದರೆ ಜೆಡಿಎಸ್ ಯಾವುದೇ ಕಾರಣಕ್ಕೂಪೂರ್ಣ ನಂಬಿಕೆ ಇಡುವ ಪಕ್ಷವಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜೆಡಿಎಸ್ ಅನ್ನು ಯಾವುದೇ ಕಾರಣಕ್ಕೂ ನಂಬುವಂತಿಲ್ಲ. ಬಿಜೆಪಿ ಪ್ರಬಲವಾಗಿ ಕಟ್ಟಬೇಕು. ಅದೇ ನನ್ನ ಉದ್ದೇಶ.ಈ ವಿಚಾರವನ್ನು ನಾನು ಪಕ್ಷದ ವರಿಷ್ಠರ ವೇದಿಕೆಯಲ್ಲಿ ಚರ್ಚಿಸುತ್ತೇನೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಯನ್ನು ಬಲಿಷ್ಠವಾಗಿ ಸಂಘಟಿಸಬೇಕು ಎಂಬ ಉದ್ದೇಶವಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕುಮಾರಸ್ವಾಮಿ ಅವರು ನನ್ನ ಬಗ್ಗೆ ವೈಯಕ್ತಿಕವಾಗಿಕೆಳಮಟ್ಟದಲ್ಲಿ ಮಾತನಾಡುತ್ತಿದ್ದರು. ಈ ರೀತಿ ಮಾತನಾಡದಂತೆ ನಾಲ್ಕು ಜನರ ಬಳಿ ಹೇಳಿ ಕಳುಹಿಸಿ ನೋಡಿದೆ. ಆದರೂ ಅವರು ಇ ರೀತಿ ಮಅತನಾಡುವುದನ್ನು ನಿಲ್ಲಿಸಲಿಲ್ಲ. ನನಗೆ ತುಂಬಾನೋವಾಯ್ತು. ಅದಕ್ಕೆ , ಅದೇ ಕಾರಣಕ್ಕೆ ನಾನೂ ಮಾತನಾಡಿದೆ ಎಂದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement