ಪಶ್ಚಿ ಬಂಗಾಳದಲ್ಲಿ ೨೫ ಕೋಟಿ ರೂ.ಮೌಲ್ಯದ ಹೆರಾಯಿನ್‌ ವಶ

ಕೊಲ್ಕತ್ತಾ;ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 25.09 ಕೋಟಿ ಮೌಲ್ಯದ 5 ಕೆಜಿಗೂ ಅಧಿಕ ಹೆರಾಯಿನ್ ಅನ್ನು ಪಶ್ಚಿಮ ಬಂಗಾಳದ ಪುರ್ಬಾ ಬಧಾಮನ್ ಜಿಲ್ಲೆಯಲ್ಲಿ ಕೊಲ್ಕತ್ತಾ ಪೊಲೀಸ್ ವಿಶೇಷ ಕಾರ್ಯ ಪಡೆ (ಎಸ್ಟಿಎಫ್) ವಶಪಡಿಸಿಕೊಂಡಿದ್ದು, ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ.
ಈ ಬಗ್ಗೆ ಎಸ್ಟಿಎಫ್ ಹಿರಿಯ ಅಧಿಕಾರಿ ಮಾತನಾಡಿ, ಖಚಿತ ಸುಳಿವಿನ ಮೇರೆಗೆ ನಮ್ಮ ಪೊಲೀಸ್ ತಂಡ ಸೋಮವಾರ ಮಧ್ಯರಾತ್ರಿ ಇಲ್ಲಿನ ಮೆಮರಿ ಪ್ರದೇಶದಲ್ಲಿರುವ ರಸೂಲ್ಪುರ ಬಜಾರ್ನಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲರ್ ವಾಹನದಿಂದ ನಿಷಿದ್ಧ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದರು.
ಬಜಾರಿನಲ್ಲಿದ್ದ ಏಜೆಂಟ್ ಒಬ್ಬನಿಗೆ ಸರಕು ತಲುಪಿಸಲು ಡ್ರಗ್ಸ್ ಪೆಡ್ಲರ್ ಬಂದೇ ಬರುತ್ತಾನೆ ಎಂಬ ಮಾಹಿತಿ ನಮಗೆ ಮೊದಲೇ ತಿಳಿದಿತ್ತು. ಅವನ ಬಂದ ತಕ್ಷಣ ಕಾರನ್ನು ಸುತ್ತುವರಿದು ಆತನನ್ನು ಬಂಧಿಸಿದ್ದು, ಕಾರಿನಲ್ಲಿದ್ದ 5.08 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಯಿತು. ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ವಸ್ತುಗಳು (ಎನ್ಡಿಪಿಎಸ್) ಕಾಯಿದೆಯಡಿ ದೂರನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಸದ್ಯದಲ್ಲೇ ಪಶ್ಚಿಮ ಬಂಗಾಳದಲ್ಲಿ ಚುನಾವಣೇ ಇರುವ ಕಾರಣ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಏಷ್ಯನ್ ಗೇಮ್ಸ್‌ನಿಂದ 3 ಭಾರತೀಯ ಅಥ್ಲೀಟ್‌ಗಳಿಗೆ ಚೀನಾ ನಿಷೇಧದ ನಂತರ ಕ್ರೀಡಾ ಸಚಿವರ ಪ್ರವಾಸ ರದ್ದು

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement