ಬೆಂಗಳೂರು: ಬಿಜೆಪಿಯ ಆಂತರಿಕ ಜಗಳದ ಫಲವಾಗಿ ಮೊದಲ ಒಂದು ಸಿಡಿ ಹೊರಬಿದ್ದಿದೆ ಎಂದು ಸಚಿವರ ರಾಸಲೀಲೆಯದ್ದು ಎನ್ನಲಾದ ಸಿಡಿ ಬಗ್ಗೆ ರಾಜ್ಯ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.
ಇದು ಕೇವಲ ಟ್ರೇಲರ್ “ಪಿಚ್ಚರ್ ಅಭಿ ಬಾಕಿ ಹೈ ಎಂದು ಕೆಪಿಸಿಸಿ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
ಜಾರಕಿಹೊಳಿ ಸೆಕ್ಸ್ ಸಿಡಿ ಬಯಲಾಗುತ್ತಿದ್ದಂತೆ ಅಸಮಾಧಾನಿತರು, ಅತೃಪ್ತರು ಒಳಗೊಳಗೇ ಸಂತೃಪ್ತಿಯ ನಗು ಚೆಲ್ಲಿದ್ದಾರೆ ಎಂದು ಹೇಳಿದೆ.
ಡಿಯರ್ ರಾಜ್ಯ ಬಿಜೆಪಿ, ನಿಮ್ಮವರೇ ನಿಮಗೆ ಬ್ಲಾಕ್ ಮೇಲ್ ಜನತಾ ಪಾರ್ಟಿ ಹೆಸರು ಕೊಟ್ಟಿದ್ದು ಇದಕ್ಕೇನಾ? ಎಂದು ಪ್ರಶ್ನಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ