ಮೋದಿ ಹೊಗಳಿದ್ದಕ್ಕೆ ಆಜಾದ್‌ ಪ್ರತಿಕ್ರತಿ ದಹನ, ಆನಂದ ಶರ್ಮಾ ವಿರುದ್ಧ ಅಧೀರ್‌ ವಾಗ್ದಾಳಿ.

ಪಂಚರಾಜ್ಯಗಳ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಂತರ್ಯುದ್ಧವೂ ಜೋರಾಗಿದೆ. ಜಮ್ಮುವಿನಲ್ಲಿ ಪ್ರಧಾನಿ ಮೋದಿ ಹೊಗಳಿದ್ದಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಮಾಮ್‌ ನಬಿ ಆಜಾದ್‌ ವಿರುದ್ದ ಜಮ್ಮುವಿನಲ್ಲಿ ಆಕ್ರೋಶಿತ ಕಾಂಗ್ರೆಸ್‌ ಕಾರ್ಯಕರ್ತರು ಅವರ ಪ್ರತಿಕೃತಿ ದಹನ ಮಾಡಿದ್ದಾರೆ.
ಅದೇರೀತಿ ಪಶ್ಚಿಮ ಬಂಗಾಳದಲ್ಲಿ ಜಾತ್ಯತೀತ ನಿಲುವು ಹೊಂದಿರುವ ಕಾಂಗ್ರೆಸ್‌ ಪಕ್ಷವು ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಜೊತೆ ಚುನಾವನೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಹರಿಹಾಯ್ದಿದ್ದ ಆನಂದ ಶರ್ಮಾ ವಿರುದ್ಧ ಅಧೀರ್‌ ರಂಜನ್‌ ಚೌಧರಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಡಿಸಿ ಸದಸ್ಯ ಹಾಗೂ ಜೆ-ಕೆ ಕಾಂಗ್ರೆಸ್ ಮಾಜಿ ಪ್ರಧಾನಕಾರ್ಯದರ್ಶಿ ಶಾನವಾಜ್ ಚೌಧರಿ ನೇತೃತ್ವದಲ್ಲಿ
ಜಮ್ಮು-ಕಾಶ್ಮೀರದ ಪ್ರೆಸ್ ಕ್ಲಬ್ ನ ಹೊರ ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಈ ಸಂಬಂಧ ಗುಲಾಂ ನಬಿ ಆಜಾದ್ ಅವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಗುಲಾಂ ನಬಿ ಆಜಾದ್ ಅವರನ್ನು ದಶಕಗಳ ಕಾಲ ಬೆಳೆಸಿದ್ದು, ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಕಾಂಗ್ರೆಸ್ಸಿನ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ನಾಯಕತ್ವ. ಆದರೆ ಈಗ ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವ ಗುಲಾಮ್ ನಬಿ ಆಜಾದ್ ಪಕ್ಷ ದುರ್ಬಲಗೂಳಿಸಲು ಯತ್ನಿಸುತ್ತಿದ್ದಾರೆ” ಎಂದು ಶಾನವಾಜ್ ಚೌಧರಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಈಗ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ಗುಲಾಮ್ ನಬಿ ಆಜಾದ್ ರಂತಹ ನಾಯಕರ ಅನುಭವ ಪಕ್ಷಕ್ಕೆ ಬೆನ್ನೆಲುಬಾಗಬೇಕು, ಆದರೆ ವೈಯಕ್ತಿಕ ಲಾಭಕ್ಕಾಗಿ ಪಕ್ಷ ದುರ್ಬಲಗೂಳಿಸಲು ಯತ್ನಿಸುತ್ತಿರುವ ಆಜಾದ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಶಾನವಾಜ್ ಚೌಧರಿ ಆಗ್ರಹಿಸಿದ್ದಾರೆ.
ರಾಜ್ಯಸಭಾ ಸದಸ್ಯರ ಅವಧಿ ಪೂರ್ಣಗೊಳಿಸಿದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗುಲಾಮ್ ನಬಿ ಆಜಾದ್, ತಮ್ಮ ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ಎಲ್ಲ ಕಾನೂನುಗಳನ್ನು ಇಸ್ಲಾಂ ಧರ್ಮದೊಂದಿಗೆ ಅನುಸರಣೆ ಮಾಡುವ ನಿರ್ಣಯ ಅಂಗೀಕರಿಸಿದ ಪಾಕಿಸ್ತಾನ ಸಂಸತ್ತು

“ಪ್ರಧಾನಿ ನರೇಂದ್ರ ಮೋದಿ ತಮ್ಮ ತನ ಮರೆಮಾಚುವುದಿಲ್ಲ, ರಾಜಕೀಯವಾಗಿ ನಾನು ಅವರನ್ನು ವಿರೋಧಿಸಬಹುದು, ಆದರೆ ಮೋದಿ ಎಂದಿಗೂ ತಮ್ಮ ನೈಜತೆ ಮರೆಮಾಚುವುದಿಲ್ಲ. ನಮ್ಮ ಮೂಲಗಳ ಬಗ್ಗೆ ನಾವೆಂದಿಗೂ ಹೆಮ್ಮೆಯಿಂದ ಇರಬೇಕು” ಎಂದು ಆಜಾದ್ ಹೇಳಿಕೆ ನೀಡಿದ್ದರು.
ಕಳೆದ ವರ್ಷ ಕಾಂಗ್ರೆಸ್ ನಲ್ಲಿ ಗಾಂಧಿ ಪರಿವಾರದ ನಾಯಕತ್ವವನ್ನು ಪ್ರಶ್ನಿಸಿದ್ದ 23 ನಾಯಕರ ಪೈಕಿ ಕೆಲವರು
ಆಜಾದ್ ಮಾತನಾಡಿದ್ದ ಸಭೆಯಲ್ಲಿ ಭಾಗಿಯಾಗಿದ್ದರು.
ಇತ್ತ ಕಾಂಗ್ರೆಸ್ ನ ಸಂಸದೀಯ ನಾಯಕ ಅಧೀರ್ ರಂಜನ್ ಚೌಧರಿ ಪಕ್ಷದ ಸಹೋದ್ಯೋಗಿ ಆನಂದ್ ಶರ್ಮ ವಿರುದ್ಧ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎದುರಿಸಲು ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ನೊಂದಿಗೆ ಕಾಂಗ್ರೆಸ್ ಕೈ ಜೋಡಿಸಿರುವುದಕ್ಕೆ ಆನಂದ್ ಶರ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಈ ನಡೆ ಗಾಂಧಿ ಹಾಗೂ ನೆಹರು ಜಾತ್ಯತೀತತೆಗೆ ವಿರುದ್ಧವಾಗಿದೆ. ಕೋಮುಶಕ್ತಿಗಳನ್ನು ಎದುರಿಸುವುದರಲ್ಲಿ ಕಾಂಗ್ರೆಸ್ ತಾರತಮ್ಯ ಮಾಡುವಂತಿಲ್ಲ ಎಂದು ಆನಂದ್ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದು ಪಕ್ಷದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದಕ್ಕೆ ಪ್ರತಿಯಾಗಿ ಟ್ವೀಟ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಚೌಧರಿ, “ಆನಂದ್ ಶರ್ಮಾ ಅವರೇ, ವಾಸ್ತವಾಂಶ ಅರಿತುಕೊಳ್ಳಿ, ಪಶ್ಚಿಮ ಬಂಗಾಳದಲ್ಲಿ ಜಾತ್ಯತೀತ ಮೈತ್ರಿಯನ್ನು ಮುನ್ನಡೆಸುತ್ತಿರುವುದು ಸಿಪಿಐ(ಎಂ) ಇದರಲ್ಲಿ ಕಾಂಗ್ರೆಸ್ ಅವಿಭಾಜ್ಯ ಅಂಗವಾಗಿದೆ. ಬಿಜೆಪಿಯ ಕೋಮುವಾದಿ ವಿಭಜಕ ರಾಜಕೀಯವನ್ನು ಮಣಿಸಲು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.
ಐಎಸ್ಎಫ್ ಸಮಾವೇಶದಲ್ಲಿ ಅಧೀರ್ ರಂಜನ್ ಚೌಧರಿ ಭಾಗಿಯಾಗಿದ್ದು, ನೋವಿನ ಹಾಗೂ ನಾಚಿಕೆಗೇಡಿನ ಸಂಗತಿ” ಎಂದು ಆನಂದ್ ಶರ್ಮ ಹೇಳಿದ್ದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ರೆಪೊ ದರ 6.5% ಕ್ಕೆ ಹೆಚ್ಚಿಸಿದ ಆರ್‌ಬಿಐ : 2023-24 ಕ್ಕೆ ಜಿಡಿಪಿ ಬೆಳವಣಿಗೆ 6.4% ಎಂದು ಅಂದಾಜು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement