ರಾಮನಗರ : ಸಚಿವ ಸಿ.ಪಿ.ಯೋಗೇಶ್ವರ್ ಮಟ್ಟಕ್ಕೆ ನಾನು ಇಳಿಯಲಾರೆ. ಅವರ ಬಳಿ ಅದೇನೋ ಸಿಡಿ ಇದ್ದರೆ ನಾಳೆಯೇ ಬಿಡುಗಡೆ ಮಾಡಲಿ. ಚನ್ನಪಟ್ಟಣ ಇಲ್ಲ ಎಲ್ಲಾದರೂ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಮಾಡುವುದು ಅವರೊಬ್ಬರಿಗೇ ಅಲ್ಲ, ನನಗೂ ಗೊತ್ತಿದೆ. ಸಚಿವ ಯೋಗೀಶ್ವರ್ ಹೇಳಿರುವಂತ ಆ ಸವಾಲನ್ನ ನನ್ನ ಕಾರ್ಯಕರ್ತರೇ ಸ್ವೀಕಾರ ಮಾಡ್ತಾರೆ. ನಾನು ಚನ್ನಪಟ್ಟಣದಲ್ಲಿ ಅರ್ಜಿ ಹಾಕಿ ಬಂದಿದ್ದೆ. ನಾನು ಗೆಲ್ಲಲಿಲ್ಲವಾ? ಅವರು ಈ ರೀತಿಯ ಹೇಳಿಕೆಗಣ್ನು ನೀಡುವುದು ಬೇಡ. ಒಂದು ವೇಳೆ ಅವರ ಹತ್ತಿರ ಸಿಡಿ ಇದ್ದರೆ ಬಿಡುಗಡೆ ಮಾಡಲಿ ಎಂದರು.
ಇದೇ ಸಂದರ್ಭದಲ್ಲಿ ಸಚಿವ ಬಿ.ಸಿ.ಪಾಟೀಲ್ ಮನೆಗೆ ಕರೆಸಿ ವ್ಯಾಕ್ಸಿನ್ ತೆಗೆದುಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರದಲ್ಲಿ ಯಾರು ಏನ್ ಬೇಕಾದರೂ ಮಾಡಬಹುದು ಬನ್ನಿ ಎಂದು ಉತ್ತರಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ