ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ ಕಶ್ಯಪ ಮನೆ ಮೇಲೆ ಐಟಿ ದಾಳಿ

ತೆರಿಗೆ ವಂಚನೆ ಆರೋಪದ ಅಡಿ ಐಟಿ ಅಧಿಕಾರಿಗಳು ಬುಧವಾರ ಬಾಲಿವುಡ್​ ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ್​ ಕಶ್ಯಪ್​​, ವಿಕ್ರಮಾದಿತ್ಯ ಮೋಟ್ವಾನೆ, ವಿಕಾಸ್​ ಬಹ್ಲ್​ ಹಾಗೂ ಮಧು ಮಾಂಟೇನಾ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ
. ಪ್ರಕರಣ ಸಂಬಂಧ ಐಟಿ ಅಧಿಕಾರಿಗಳು ಮುಂಬೈ ಹಾಗೂ ಪುಣೆಯ ೩೦ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಫ್ಯಾಂಟಮ್​ ಫಿಲ್ಮ್ಸ್ ಹಾಗೂ ಇವೆಂಟ್ ಮ್ಯಾನೇಜ್​ಮೆಂಟ್​ ಕಂಪನಿಗೆ ಸಂಬಂಧಿಸಿದಂತೆ ಐಟಿ ಇಲಾಖೆ ಬುಧವಾರ ಬೆಳಿಗ್ಗೆಯಿಂದ ದಾಖಲೆಗಳನ್ನ ಪರಿಶೀಲಿಸುತ್ತಿದೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಫ್ಯಾಂಟಮ್​ ಫಿಲ್ಮ್ಸ್ ಪ್ರೊಡಕ್ಷನ್​ ಹೌಸ್​ ನಿರ್ಮಿಸಿದ ಸಿನಿಮಾಗಳು ಸೂಪರ್​ಹಿಟ್​ ಆಗಿದ್ದರೂ ತೆರಿಗೆ ವಂಚನೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಕಂಪನಿಯ ಖಾತೆಯಲ್ಲಿರುವ ಹಣಕ್ಕೂ, ಕಂಪನಿಯ ದಾಖಲೆಯಲ್ಲಿ ತೋರಿಸಿರುವ ಆದಾಯದ ಮೊತ್ತಕ್ಕೂ ವ್ಯತ್ಯಾಸ ಕಂಡು ಬಂದಿದ್ದರಿಂದ ಈ ದಾಳಿ ನಡೆಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಆದಾಯ ತೆರಿಗೆ ದಾಳಿಯು ಯಾವುದೇ ನಿರ್ದಿಷ್ಟ ವ್ಯಕ್ತಿಯ ವಿರುದ್ಧವಲ್ಲ. ಆದರೆ ಅವರು ಮಾಲೀಕತ್ವ ಹೊಂದಿರುವ ಕಂಪನಿಗೆ ಸಂಬಂಧಪಟ್ಟಿದ್ದಾಗಿದೆ. ಹೀಗಾಗಿ ಇದಕ್ಕೆ ಸಂಬಂಧಿಸುವವರೆಲ್ಲರ ಮನೆ ಮೇಲ ದಾಳಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ರೆಪೊ ದರ 6.5% ಕ್ಕೆ ಹೆಚ್ಚಿಸಿದ ಆರ್‌ಬಿಐ : 2023-24 ಕ್ಕೆ ಜಿಡಿಪಿ ಬೆಳವಣಿಗೆ 6.4% ಎಂದು ಅಂದಾಜು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

1 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement