ಅಜ್ಜಿಗೆ ಮೊಮ್ಮಗು ಜೊತೆ ವಿಶೇಷ ಬಾಂಧ್ಯವಿದ್ದರೂ ಪೋಷಕರಿಂದ ಬೇರೆ ಮಾಡುವಂತಿಲ್ಲ: ಮುಂಬೈ ಹೈಕೋರ್ಟ್‌

ಮುಂಬೈ: ಅಜ್ಜಿ ಮತ್ತು ಮೊಮ್ಮಗುವಿನ ನಡುವೆ ವಿಶೇಷ ಬಾಂಧವ್ಯವಿದೆಯಾದರೂ, ಮಗು ಮತ್ತು ಆತನ ಜೈವಿಕ ಪೋಷಕರ ನಡುವಿನ ಸಹಜ ಬಾಂಧವ್ಯವನ್ನು ಬೇರೆ ಮಾಡಲು ಸಾಧ್ಯವಿಲ್ಲ ಎಂದು ನಾಶಿಕ್ ನಿವಾಸಿಗೆ ಮುಂಬೈ ಹೈಕೋರ್ಟ್ ಬುಧವಾರ ತಿಳಿಸಿದೆ.
ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಪೀಠ ಬುಧವಾರ ನಾಶಿಕ್ ನಿವಾಸಿಗೆ ತನ್ನ 12 ವರ್ಷದ ಮೊಮ್ಮಗನನ್ನು ಅವರ ಪೋಷಕರಿಗೆ ಹಸ್ತಾಂತರಿಸಲು ನಿರ್ದೇಶನ ನೀಡಿದೆ. ಈ ವರ್ಷದ ಆರಂಭದಲ್ಲಿ ದಂಪತಿ ತಮ್ಮ ಮಗುವನ್ನು ಬಿಟ್ಟು ಕೊಡಲು ಮಗುವಿನ ತಾಯಿ ಅಜ್ಜಿ ನಿರಾಕರಿಸಿದ ಕಾರಣ ದಂಪತಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮಗುವಿನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಬೆಡ್‌ರೆಸ್ಟ್‌ಗೆ ಸಲಹೆ ನೀಡಲಾಗಿದೆ ಎನ್ನುವ ಕಾರಣಕ್ಕೆ 2019ರಲ್ಲಿ ತನ್ನ ತಾಯಿಯೊಂದಿಗೆ (ಮಹಿಳೆ ಅಮ್ಮ) ಇರುವ ಸಲುವಾಗಿ ಆ ಮಗುವಿನ ತಾಯಿ ಹಾಗೂ ಮಗು ತಾತ್ಕಾಲಿಕವಾಗಿ ನಾಶಿಕ್ ಗೆ ಸ್ಥಳಾಂತರಗೊಂಡಿದ್ದರು.
ಮಗುವನ್ನು ನಾಶಿಕ್ ಶಾಲೆಯೊಂದಕ್ಕೆ ಸೇರಿಸಲಾಯಿತು, ಮಗುವಿನ ತಾಯಿ ಚೇತರಿಸಿಕೊಂಡ ನಂತರ, 2020-21ರ ಶೈಕ್ಷಣಿಕ ಅಧಿವೇಶನಕ್ಕಾಗಿ ಪುಣೆಗೆ ಮರಳಲು ಮಹಿಳೆ ಮತ್ತು ಮಗು ಸಿದ್ಧವಾಗಿದ್ದರು, ಆದರೆ ಕೋವಿಡ್-19 ಸಾಂಕ್ರಾಮಿಕ ಕಾರಣದಿಂದ ಸಾಧ್ಯವಾಗಲಿಲ್ಲ, ನಂತರದ ದಿನಗಳಲ್ಲಿ ಮಗುವನ್ನು ಪುಣೆಗೆ ಕರೆತರಲು ದಂಪತಿಯು ನಾಸಿಕ್ ಗೆ ತೆರಳಿದಾಗ, ಅಜ್ಜಿ ಆತನನ್ನು ಬಿಟ್ಟು ಹೋಗಲು ನಿರಾಕರಿಸಿದರು. 12 ವರ್ಷದ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪೋಷಕರ ನಡುವೆ ವೈವಾಹಿಕ ಕಲಹವಿದೆ ಎಂದು ಆಕೆ ಪೊಲೀಸ್ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಮೊರೆ ಹೋಗಿದ್ದಳು. ನಂತರ ದಂಪತಿ ತಮ್ಮ ಮಗುವನ್ನು ವಶಕ್ಕೆ ಪಡೆಯಲು ಹೈಕೋರ್ಟ್ ಮೊರೆ ಹೋಗಿದ್ದರು. ‘ಮಗುವಿನ ಸಂತೃಪ್ತಿ, , ಆರೋಗ್ಯ, ಶಿಕ್ಷಣ, ದೈಹಿಕ, ನೈತಿಕ ಮತ್ತು ಬೌದ್ಧಿಕ ಬೆಳವಣಿಗೆ, ಭವಿಷ್ಯ ಪೋಷಕರಲ್ಲಿದೆ’ ಎಂದು ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಮತ್ತು ಮನೀಶ್ ಪಿತಲೆ ಅವರನ್ನೊಳಗೊಂಡ ಹೈಕೋರ್ಟ್ ನ ಪೀಠ ಹೇಳಿದೆ. ಇದೇ ವೇಳೆ ತನ್ನ 12 ವರ್ಷದ ಮೊಮ್ಮಗನನ್ನು ಅವರ ಪೋಷಕರಿಗೆ ಹಸ್ತಾಂತರಿಸಲು ನಿರ್ದೇಶನ ನೀಡಿದೆ.

ಪ್ರಮುಖ ಸುದ್ದಿ :-   ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯತಂತ್ರ ಮರುರೂಪಿಸಿ ಪಕ್ಷದ ಅಭೂತಪೂರ್ವ ಗೆಲುವಿನ ಹಿಂದಿನ ಸೂತ್ರದಾರ ಈ ವಿಷ್ಣುದತ್ತ ಶರ್ಮಾ...

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement