‘ಈಸ್ ಆಫ್ ಲಿವಿಂಗ್ ಇಂಡೆಕ್ಸ್’ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ

ನವ ದೆಹಲಿ: ಈಸ್ ಆಫ್ ಲಿವಿಂಗ್ ಇಂಡೆಕ್ಸ್ (EoLI) 2020 ಮತ್ತು ಮುನಿಸಿಪಲ್ ಪರ್ಫಾರ್ಮೆನ್ಸ್ ಇಂಡೆಕ್ಸ್ (MPI) 2020ʼರ ಕ್ರಮಾಂಕಗಳನ್ನು ಕೇಂದ್ರ ಸಚಿವ ಎಚ್. ಎಸ್. ಪುರಿ . ಪ್ರಕಟಿಸಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಮೊದಲ ಸ್ಥಾನ ಪಡೆದಿದೆ.
ಭಾರತದ 111 ನಗರಗಳಲ್ಲಿ ಈಸ್ ಆಫ್ ಲಿವಿಂಗ್ ಇಂಡೆಕ್ಸ್ (EoLI) 2020 ನಡೆಸಲಾಗಿದ್ದು, ಇದರಲ್ಲಿ ಬೆಂಗಳೂರು ಅತಿ ಹೆಚ್ಚು ವಾಸಯೋಗ್ಯ ನಗರವೆಂದು ಪರಿಗಣಿಸಲ್ಪಟ್ಟಿದೆ. ನಂತರದಲ್ಲಿ ಪುಣೆ, ಅಹಮದಾಬಾದ್, ಚೆನ್ನೈ, ಸೂರತ್, ನವಿ ಮುಂಬೈ, ಕೊಯಮತ್ತೂರು, ವಡೋದ್ರಾ, ಇಂದೋರ್ ಮತ್ತು ಗ್ರೇಟರ್ ಮುಂಬಯಿಗಳಿವೆ..
ಮಿಲಿಯನ್ ಪ್ಲಸ್ ಜನಸಂಖ್ಯೆ’ ವಿಭಾಗದಲ್ಲಿ ಲಿವ್ವೇಬಿಲಿಟಿ ಸೂಚ್ಯಂಕದ 49 ನಗರಗಳ ಪೈಕಿ ದೆಹಲಿ 13ನೇ ಸ್ಥಾನ ಮತ್ತು ಶ್ರೀನಗರ ನಂತರದ ಸ್ಥಾನದಲ್ಲಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಬಿಡುಗಡೆ ಮಾಡಿರುವ ಸೂಚ್ಯಂಕದ ಪ್ರಕಾರ, ಶಿಮ್ಲಾವು ‘ಮಿಲಿಯನ್ ಗಿಂತ ಕಡಿಮೆ ಜನಸಂಖ್ಯೆಯುಳ್ಳ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement