ಕಡ್ಡಾಯ ಮತದಾನ: ಸ್ಪೀಕರ್‌ ಕಾಗೇರಿ ಪ್ರತಿಪಾದನೆ

ಬೆಂಗಳೂರು: ಕಡ್ಡಾಯ ಮತದಾನವನ್ನು ಪ್ರತಿಪಾದಿಸಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಏಕ ಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವುದರಿಂದ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಏರು ಮಟ್ಟದಲ್ಲಿ ತೆಗೆದುಕೊಂಡು ಹೋಗಲು ಸಹಾಯವಾಗುತ್ತಿದೆ ಎಂದು ಹೇಳಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿಂದು ಒಂದು ರಾಷ್ಟ್ರ, ಒಂದು ಚುನಾವಣೆಯ ಚರ್ಚೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಒಂದು ಬಾರಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸಿದರೆ ಮಾನವ ಶ್ರಮ, ಸಮಯ ಮತ್ತು ಹಣ ಉಳಿತಾಯವಾಗಲಿದೆ. ಮೂಲಸೌಕರ್ಯ, ಸಿಬ್ಬಂದಿ ರಕ್ಷಣಾ ವೆಚ್ಚ, ಮತ ಎಣಿಕೆ ಎಲ್ಲದರಲ್ಲೂ ದೇಶದ ಆರ್ಥಿಕತೆಯ ಹೊರೆ ಕಡಿತಗೊಳ್ಳಲಿದೆ. ಏಕಮತ ಪಟ್ಟಿ ರೂಪಿಸಿಕೊಳ್ಳುವ ಅದಕ್ಕೆ ಆಧಾರ್ ಚೀಟಿಯನ್ನು ಅಳವಡಿಸುವ ಕೆಲಸ ಮತ್ತು ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಶೇಕಡವಾರು ಮತದಾರರಲ್ಲಿ ತೀವ್ರ ಕುಸಿತ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕಡ್ಡಾಯ ಮತದಾನ ಜಾರಿ ಮಾಡಬೇಕು ಎಂದು ಸಲಹೆ ನೀಡಿದರು.
೧೯೫೧ರ ಜನಪ್ರತಿನಿಧಿ ಕಾಯ್ದೆ ಅಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ. ಚುನಾವಣೆ ವಿಧಿ ವಿಧಾನಗಳು ಅಪರಾಧ ಹಿನ್ನೆಲೆಯವರು ಸ್ಪರ್ಧಿಸುವ ಬಗ್ಗೆ ಮೊದಲಾದ ಸುಧಾರಣೆಗಳು ಈ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯವಿದೆ. ಹಣ ಮತ್ತು ಜಾತಿ ಬಲದಿಂದ ಚುನಾವಣೆಗೆ ಸ್ಪರ್ಧಿಸುವ ಮತ್ತು ನಡೆಯುವ ಚುನಾವಣೆಗಳಿಗೆ ಸುಧಾರಣೆ ತರಬಹುದಾಗಿದೆ ಎಂದರು.
ಒಂದು ರಾಷ್ಟ ಒಂದು ಚುನಾವಣೆ ವಿಷಯದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷವೆಂದು ಮಾನ್ಯತೆ ಪಡೆದಿರುವವರ ಜತೆ ಚರ್ಚಿಸಬೇಕಿದೆ. ಇದಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಮತ್ತು ಎಲ್ಲರ ಸಹಮತಿ ಅಗತ್ಯ. ಬಹುಪಕ್ಷ ವ್ಯವಸ್ಥೆ, ಮೈತ್ರಿ ಸರ್ಕಾರಗಳು ಮಧ್ಯಂತರ ಚುನಾವಣೆಗಳ ಈ ಕಾಲದಲ್ಲಿ ಚುನಾವಣೆಯಲ್ಲಿ ಏಕರೂಪತೆ ತರಲು ಬಯಸುವುದು ಒಂದು ದೊಡ್ಡ ಸವಾಲು. ಈ ಪ್ರಸ್ತಾವನೆಯ ಎಲ್ಲ ಮಗ್ಗಲುಗಳ ಮೇಲೆ ಬೆಳಕು ಚೆಲ್ಲುವಂತಹ ವ್ಯಾಪಕ ಸಾರ್ವಜನಿಕ ಚರ್ಚೆ ಮೊದಲು ನಡೆಯಬೇಕು ಎಂದು ಹೇಳಿದರು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement