ತಾಜ್ ಮಹಲ್‌ಗೆ ಬಾಂಬ್‌ ಬೆದರಿಕೆ ಕರೆ; ಪ್ರವಾಸಿಗರ ಹೊರಗೆ ಕಳುಹಿಸಿ ಭದ್ರತಾ ತಪಾಸಣೆ

ಆಗ್ರಾ/ನವದೆಹಲಿ: ಬಾಂಬ್‌ ಇರುವುದಾಗಿ ಕರೆ ಬಂದ ಬೆನ್ನಲ್ಲೇ ತಾಜ್‌ ಮಹಲ್‌ ಆವರಣದಲ್ಲಿದ್ದ ಪ್ರವಾಸಿಗರನ್ನು ಖಾಲಿ ಮಾಡಿಸಲಾಗಿದೆ. ಸುಮಾರು ಸಾವಿರ ಪ್ರವಾಸಿಗರನ್ನು ಸ್ಥಳದಿಂದ ಕಳುಹಿಸಿ, ಬಾಂಬ್‌ ಪತ್ತೆಗಾಗಿ ಹುಡುಕಾಟ ನಡೆಸಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಅನಾಮಧೇಯ ವ್ಯಕ್ತಿ ತಾಜ್‌ ಮಹಲ್‌ನಲ್ಲಿ ಬಾಂಬ್ ಇರುವುದಾಗಿ ಉತ್ತರ ಪ್ರದೇಶ ಪೊಲೀಸರ 112 ತುರ್ತು ಸ್ಪಂದಿಸುವ ಸಂಖ್ಯೆಗೆ ಬೆಳಿಗ್ಗೆ 9ಕ್ಕೆ ಕರೆ ಮಾಡಿದ್ದ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಸಿಬ್ಬಂದಿ ತಾಜ್‌ ಮಹಲ್‌ ಭದ್ರತೆ ವಹಿಸಿದ್ದು, ಪೊಲೀಸರು ಕೂಡಲೇ ಸಿಐಎಸ್‌ಎಫ್‌ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಪ್ರವಾಸಿಗರನ್ನು ಹೊರಗೆ ಕಳುಹಿಸಿದ ಭದ್ರತಾ ಸಿಬ್ಬಂದಿ 9:15ಕ್ಕೆ ಬಾಂಬ್‌ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ.ಈಗ ಬಹುತೇಕ ಪರಿಶೀಲನೆ ಪೂರ್ಣಗೊಂಡಿದ್ದು, ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ’ ಎಂದು ತಿಳಿಸಲಾಗಿದೆ.ಉತ್ತರ ಪ್ರದೇಶದ ಫಿರೋಜಾಬಾದ್‌ನಿಂದ ಸುಳ್ಳು ಬೆದರಿಕೆ ಕರೆ ಬಂದಿರುವುದಾಗಿ ಪತ್ತೆ ಮಾಡಲಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ದೆಹಲಿ ಗುರುಗ್ರಾಮದಲ್ಲಿ ಬೈಕನ್ನು 4 ಕಿಮೀ ಎಳೆದೊಯ್ದ ಕಾರು; ಎಳೆದೊಯ್ಯುವಾಗ ರಸ್ತೆಯಲ್ಲಿ ಬೆಂಕಿ ಕಿಡಿ ಹಾರುವ ವೀಡಿಯೊ ವೈರಲ್ | ವೀಕ್ಷಿಸಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement