ವಧು ದಕ್ಷಿಣೆಗೆ ೬೦ ಪುಸ್ತಕ ಕೇಳಿದ ಮದುಮಗಳು…!

ಮುಸ್ಲಿಂ ಸಂಪ್ರದಾಯದಲ್ಲಿ ವರನು ವಧುವಿಗೆ ವಧು ದಕ್ಷಿಣೆ ನೀಡುವ ಸಂಪ್ರದಾಯವಿದೆ. ಇದಕ್ಕೆ ಮೆಹರ್​ ಎಂದು ಕರೆಯುತ್ತಾರೆ.ಆದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಮುಸ್ಲಿಂ ವಿವಾಹವೊಂದರಲ್ಲಿ ವಧು ಮೆಹರ್​ ಅಸಾಮಾನ್ಯ ಬೇಡಿಕೆ ಇಟ್ಟಿದ್ದಾಳೆ.
ಅವಳ ವಧು ದಕ್ಷಿಣೆ ರೂಪದಲ್ಲಿ 60 ಪುಸ್ತಕಗಳಿಗೆ ಬೇಡಿಕೆ ಇಡುವ ಮೂಲಕ ಗಮನಸೆಳೆದಿದ್ದಾಳೆ.
24 ವರ್ಷದ ಮೋಯ್ನಾ ಖಾತುನ್​ ಮುರ್ಷಿಬಾದ್​ನ ನಿವಾಸಿಯಾಗಿದ್ದಾಳೆ.ಈಕೆ ಕಲ್ಯಾಣಿ ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾಳೆ. ಈಕೆ 24 ವರ್ಷದ ಭೂಗೋಳ ಶಾಸ್ತ್ರ ಪದವೀಧರ ಮಿಝಾನುರ್​​ ರೆಹಮಾನ್​ ಜೊತೆ ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ.ಈಕೆ ಮೊದಲೇ ತನ್ನ ಪೋಷಕರ ಬಳಿ ತಾನು ಮೆಹರ್​​ ಅನ್ನು ರೂಪದಲ್ಲಿ ಪುಸ್ತಕಗಳನ್ನ ಕೇಳಲಿದ್ದೇನೆ ಎಂದು ಹೇಳಿದ್ದಳು.
ಆಕೆಗೆ ಸಾಂಪ್ರದಾಯಿಕ ವಧುದಕ್ಷಿಣೆಯಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ಮೊದಲು ಈಕೆಯ ಬೇಡಿಕೆ ಕೇಳಿ ಪೋಷಕರಿಗೆ ಶಾಕ್​ ಆಗಿತ್ತು. ಆದರೆ ವರನ ಕುಟುಂಬಸ್ಥರು ಮಾತ್ರ ಖುಷಿಯಿಂದಲೇ ಮೊಯ್ನಾ ಬೇಡಿಕೆಯನ್ನ ಈಡೇರಿಸಲು ಒಪ್ಪಿದ್ದಾರೆ ಎಂದು ಮೊಯ್ನಾ ಕುಟುಂಬಸ್ಥರು ಹೇಳಿದ್ದಾರೆ. ಮೊಯ್ನಾ 60 ಪುಸ್ತಕಗಳನ್ನ ಕೇಳಿದರೆ ಆಕೆಯ ಗಂಡನ ಮನೆಯವರು ಅದಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನ ಆಕೆಗೆ ಕೊಡಿಸಿದ್ದಾರೆ.

ಪ್ರಮುಖ ಸುದ್ದಿ :-   ರಕ್ಷಾ ಬಂಧನ ಹಬ್ಬದಂದೇ ಮಾರಕವಾಯ್ತು ಮಾತು : ಅತ್ತಿಗೆಯನ್ನು ಕೊಂದು ಟ್ಯಾಂಕ್‌ಗೆ ಶವ ಎಸೆದ ನಾದಿನಿ !

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement