ಸಿಡಿ ಹಗರಣ: ಇದು ಹನಿ ಟ್ರ್ಯಾಪ್‌ ಎಂದ ಶಾಸಕ ಕುಮಟಳ್ಳಿ

ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣದಲ್ಲಿ ರಾಜೀನಾಮೆ ನೀಡಿದ ರಮೇಶ ಜಾರಕಿಹೊಳಿ ಬೆಂಬಲಕ್ಕೆ ಈಗ ಶಾಸಕ ಮಹೇಶ ಕುಮಟಳ್ಳಿ ಬಂದಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರೂ ಪ್ರಬುದ್ಧರು, ಯುವತಿಯ ಸಮ್ಮತಿ ಇರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಮೇಲ್ನೋಟಕ್ಕೆ ಇದು ಹನಿಟ್ರ್ಯ‍ಾಪ್ ಎಂದು ಅನಿಸುತ್ತದೆ ಎಂದು ಅವರು ಹೇಳಿದರು.
ಹಿಂದೆ ರಾಜ ಮಹಾರಾಜರ ಕಾಲದಲ್ಲಿ ವಿಷಕನ್ಯೆ ಬಿಟ್ಟು ಇಂಥವುಗಳನ್ನು ಮಾಡುತ್ತಿದ್ದರು. ಈಗ ಹನಿಟ್ರ್ಯಾಪ್ ಮಾಡುತ್ತಿದ್ದಾರೆ.
ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೇನೆ. ದೃಶ್ಯಾವಳಿ ನೋಡಿದರೆ ಅತ್ಯಾಚಾರ ಅನ್ನಿಸುವುದಿಲ್ಲ. ಇದರ ಹಿಂದೆ ಷಡ್ಯಂತ್ರ ಅಡಗಿದೆ ಎಂಬುದೂ ಗೊತ್ತಾಗುತ್ತದೆ ಎಂದರು.
ರಮೇಶ ಜಾರಕಿಹೊಳಿ ಅವರನ್ನು ಬೇಟಿ ಮಾಡುವ ಎಂದು ಬಂದಿದ್ದೆ. ಆದರೆ ಅವರು ಸಿಗಲಿಲ್ಲ. ರಮೇಶ ಜಾರಕಿಹೊಳಿ ದೈವ ಭಕ್ತರು. ಆದರೆ ಇದೆಲ್ಲ ಯಾಕೆ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಶಾಸಕ ಕುಮಟಳ್ಳಿ ಹೇಳಿದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement