ಅಯೋಧ್ಯೆಯಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ ಹೊರ ರಾಷ್ಟ್ರಗಳಿಗೆ ಅವಕಾಶ

ಲಖನೌ: ಅಯೋಧ್ಯೆ ಅಂತಾರಾಷ್ಟ್ರೀಯ ಧಾರ್ಮಿಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ ಕೋರಿದ್ದ ಸುಮಾರು ೧೨ ಹೊರ ರಾಷ್ಟ್ರಗಳಿಗೆ ಯೋಗಿ ಆದಿತ್ಯ ನಾಥ್ ಸರ್ಕಾರ ಅವಕಾಶ ನೀಡಿದೆ.
ಭಗವಾನ್ ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ತಮ್ಮ ಅತಿಥಿ ಗೃಹ ನಿರ್ಮಿಸಿಕೊಳ್ಳಲು ಮಾರಿಷಿಯಸ್‌, ಕೆನಡಾ, ನೇಪಾಳ, ಶ್ರೀಲಂಕಾ,ಫಿಜಿ, ಕೀನ್ಯಾ, ಇಂಡೋನೇಷ್ಯಾ, ಕೊರಿಯಾ, ಮಲೇಷ್ಯಾ, ಟ್ರಿನಿಡಿಯಾ, ಥೈಲ್ಯಾಂಡ್ ರಾಷ್ಟ್ರಗಳು ಮನವಿ ಸಲ್ಲಿಸಿದ್ದವು.
ಕುಶಿನಗರದಲ್ಲಿ ಪೂರ್ವ ಏಷ್ಯಾ ವಲಯದ ಬಹುತೇಕ ರಾಷ್ಟ್ರಗಳ ಅತಿಥಿ ಗೃಹಗಳು ಇವೆ. ಕುಶಿನಗರದಲ್ಲಿ ಗೌತಮ ಬುದ್ಧ ಮಹಾಪರಿನಿರ್ವಾಹಣವಾಗಿದ್ದರು.
ವಿದೇಶದಿಂದ ಬರುವ ಯಾತಾರ್ಥಿಗಳ ಅತಿಥಿ ಗೃಹ ನಿರ್ಮಾಣಕ್ಕೆ 12 ಎಕರೆ ಜಾಗವನ್ನು ಗುರುತಿಸಲಾಗಿದೆ. ಇದಕ್ಕೆ ಯಾವುದೇ ರಾಷ್ಟ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಅವರಿಗೆ ಭೂಮಿ ದೊರೆಯುವಂತೆ ಮಾಡಲಾಗುವುದು ಎಂದು ಅಯೋಧ್ಯೆ ಮುನ್ಸಿಪಲ್ ಆಯುಕ್ತ ವಿಶಾಲ್ ಸಿಂಗ್ ಹೇಳಿದ್ದಾರೆ.
ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಅವಾಸ್ ವಿಕಾಸ್ ನಿಗಮ ಅಧಿಸೂಚನೆ ಹೊರಡಿಸಿದ್ದು, ವಸತಿ ಕಾಲೋನಿಗಳ ಜೊತೆಗೆ ಫೈವ್ ಸ್ಟಾರ್ ಹೋಟೆಲ್ ಗಳು, ಧರ್ಮಶಾಲಾಗಳು, ಆಶ್ರಮಗಳು ನೂತನ ಅಯೋಧ್ಯೆ ನಗರದಲ್ಲಿ ಬರಲಿವೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement