ಬೆಂಗಳೂರು: ನನಗೆ ಯುವತಿ ಪರಿಚಯ ಇಲ್ಲ,ಅವರ ಜೊತೆ ಯಾವುದೇ ಸಂಪರ್ಕವೂ ಇಲ್ಲ. ನನಗೆ ಸಂತ್ರಸ್ತ ಯುವತಿಯ ಕುಟುಂಬದ ಸದಸ್ಯರೊಬ್ಬರ ಪರಿಚಯವಿದೆ. ಅವರೇ ನನಗೆ ಸಿಡಿ ಕೊಟ್ಟಿದ್ದರು ಎಮದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ತಿಳಿಸಿದ್ದಾರೆ.
ಶುಕ್ರವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ರಾಸಲೀಲೆ ಸಿಡಿ ಸಂಬಂಧವಿಚಾರಣೆಗೆ ಹಾಜರಾಗಿದ್ದ ಅವರನ್ನು ಇಂತಹ ಅವರನ್ನು ಡಿಸಿಪಿ ಅನುಚೇತ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಸತತ 4 ಗಂಟೆಗಳ ಕಾಲ ಎರಡು ಬಾರಿ ದಿನೇಶ್ ಕಲ್ಲಳ್ಳಿಯವರನ್ನು ಪ್ರಕರಣ ಕುರಿತಂತೆ ವಿಚಾರಣೆಗೆ ಒಳಪಡಿಸಿದರು.
ವಿಚಾರಣೆ ಮುಗಿಸಿ ಹೊರ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದಂ ಅವರು, ನನಗೆ ಯುವತಿಯ ಪರಿಚಯವಿಲ್ಲ. ಅವರೊಂದಿಗೆ ನನಗೆ ಯುವತಿಯ ಕುಟುಂಬದ ಸದಸ್ಯರೊಬ್ಬರೊಬ್ಬರ ಪರಿಚಯವಿದೆ. ಯುವತಿಯ ಕುಟುಂಬಸ್ಥರೇ ನನಗೆ ಸಿಡಿ ಕೊಟ್ಟಿದ್ದರೆ. ನಾನು ದೂರಿನಲ್ಲಿ ನೀಡಿದ ಮಾಹಿತಿಯನ್ನೇ ಪೊಲೀಸರ ಮುಂದೆ ಹೇಳಿರುವೆ. ನನಗೆ ಗೊತ್ತಿರುವ ಎಲ್ಲಾ ಮಾಹಿತಿಯನ್ನು ನೀಡಿರುವೆ. ಮೊದಲು ಕೊಟ್ಟ ದೂರಿನಂತೆ ಈಗಲೂ ಅದಕ್ಕೆ ಬದ್ಧವಾಗಿದ್ದೇನೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ