ರೂಪಾಂತರಿ ಕೊರೊನಾ ಸೋಂಕಿನ ವೇಗ ವಿಶ್ವದ ಎಲ್ಲೆಡೆಗಿಂತ ಬೆಂಗಳೂರಿನಲ್ಲಿಯೇ ಹೆಚ್ಚು

ಬೆಂಗಳೂರು: ರೂಪಾಂತರಿ ಕೊರೊನಾ ಸೋಂಕು ಇಡೀ ವಿಶ್ವ, ದೇಶಕ್ಕಿಂತ ಬೆಂಗಳೂರಿನಲ್ಲಿಯೇ ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಅಧ್ಯಯನದಿಂದ ಬೆಳಿಕಿಗೆ ಬಂದಿದೆ.
ರೂಪಾಂತರಿ ಸಾರ್ಸ್ ಕೋವಿಡ್-2 ರೂಪಾಂತರಗಳು ಎಷ್ಟು ಆಗಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಅಧ್ಯಯನದ ನೇತೃತ್ವ ವಹಿಸಿದ್ದ ಐಐಎಸ್‌ಸಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕ ಉತ್ಪಾಲ್ ಟಾಟು, ಮಾತನಾಡಿ, ರೂಪಾಂತರಿ ಸ್ಥಿರವಾದಾಗ ಮಾತ್ರ ಆ ಸ್ಥಿರ ರೂಪಾಂತರಿಯ ಪರಿಣಾಮ ಬೆಳಕಿಗೆ ಬರುತ್ತದೆ ಎನ್ನುತ್ತಾರೆ.
ಕೋವಿಡ್ ಐಸೊಲೇಟ್‌ ವೈರಲ್ ಜೀನೋಮ್‌ಗಳಲ್ಲಿ 27 ರೂಪಾಂತರಗಳನ್ನು ಹೊಂದಿದ್ದು, ಪ್ರತಿ ಸ್ಯಾಂಪಲ್‌ಗೆ 11ಕ್ಕೂ ಹೆಚ್ಚು ರೂಪಾಂತರಗಳಿವೆ – ಇದು ರಾಷ್ಟ್ರೀಯ ಸರಾಸರಿ ಶೇ. 8.4 ಮತ್ತು ಜಾಗತಿಕ ಸರಾಸರಿ ಶೇಕಡಾ 7.3 ಎರಡಕ್ಕಿಂತ ಹೆಚ್ಚಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಐಐಎಸ್ಸಿ ಅಧ್ಯಯನ ಮಾಡಿ ತೋರಿಸಿರುವ ಸಾಕ್ಷಿಯಲ್ಲಿ ಸಾರ್ಸ್-ಕೋವಿಡ್-2 ರೂಪಾಂತರಿ ದೇಹದ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಕುಗ್ಗಿಸುತ್ತದೆ. ಹೈ ರೆಸೊಲ್ಯೂಷನ್ ಮಾಸ್ ಸ್ಪೆಕ್ಟ್ರೊಮೆಟ್ರಿ ಎಂಬ ಅತ್ಯುನ್ನತ ತಂತ್ರಜ್ಞಾನ ಬಳಸಿ ಇದನ್ನು ಮಾಡಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿತ ವ್ಯಕ್ತಿಗಳ ಮೂಗಿನಿಂದ ಸೋರುವಿಕೆಯ ಸ್ಯಾಂಪಲ್ ಗಳನ್ನು ಪಡೆದು ಪರೀಕ್ಷೆ ಮಾಡಲಾಗಿದ್ದು ಪ್ರೋಟಿಯೋಮ್ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement