ದಿನೇಶ ಕಲ್ಹಳ್ಳಿಗೆ ಸಂಕಷ್ಟ: ಅಶ್ಲೀಲ ವಿಡಿಯೋ ಬಿಡುಗಡೆ ವಿರುದ್ಧ ಮಹಿಳೆಯಿಂದ ದೂರು ದಾಖಲು

ಬೆಂಗಳೂರು : ಈಗ ದಿನೇಶ ಕಲ್ಹಳ್ಳಿ ಅವರಿಗೆ ಸಂಕಷ್ಟ ಎದುರಾಗಿದೆ. ಅದೂ ಮಹಿಳೆಯೊಬ್ಬರಿಂದ. ದಿನೇಶ್ ಕಲ್ಹಳ್ಳಿ ಹೆಣ್ಣಿನ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮುಲಾನಿಯವರು ಇನ್ನೂ ಇಂಥ ಕೆಲ ಸಿಡಿಗಳಿವೆ ಎಂದಿದ್ದಾರೆ. ಈ ಮೂಲಕ ಯುವತಿ ಕುಟುಂಬದ ಮರ್ಯಾದೆ ತೆಗೆದಿದ್ದಾರೆ. ಹೀಗಾಗಿ ದಿನೇಶ್ ಕಲ್ಹಳ್ಳಿ ಹಾಗೂ ಮುಲಾನಿ ವಿರುದ್ಧ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಇದರಿಂದಾಗಿ ದಿನೇಶ್ ಕಲ್ಹಳ್ಳಿ, ಮುಲಾನಿಗೆ ಸಂಕಷ್ಟ ಎದುರಾದಂತೆ ಆಗಿದೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿದಂ ಕೆ.ಹೆಚ್.ಇಂದಿರಾ ಎಂಬುವವರು, ಹೆಣ್ಣಿನ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿ, ಯುವತಿ ಕುಟುಂಬದ ಮರ್ಯಾದೆಹಾಳು ಮಾಡಿದ್ದಾರೆ. ಯುವತಿ ದೂರು ದಾಖಲಿಸುವ ಬದಲು, ದಿನೇಶ್ ಕಲ್ಹಳ್ಳಿ ದೂರು ದಾಖಲಿಸಿದ್ದಾರೆ. ಅಶ್ಲೀಲ ಸಿಡಿ ಬಿಡುಗಡೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರು ನೀಡಿದ್ದಾರೆ.
ಮುಲಾನಿಯವರು ತಮ್ಮ ಬಳಿ ಮತ್ತಷ್ಟು ಸಿಡಿಗಳಿವೆ ಎಂಬುದಾಗಿ ಹೇಳುತ್ತಿದ್ದಾರೆ. ಇವರೆಲ್ಲ ತಮ್ಮ ಬೇಳೆಬೇಯಿಸಿಕೊಳ್ಳಲು ಇಂಥ ಸಿಡಿ ಬಳಸಿಕೊಂಡು ಮಹಿಳೆಯರ ಮಾನ ಹರಾಜು ಹಾಕುವ ಕೆಲಸಕ್ಕೆ ಇಳಿದಿದ್ದಾರೆ. ಹೀಗಾಗಿ ದಿನೇಶ್ ಕಲ್ಲಳ್ಳಿ ಹಾಗೂ ಮುಲಾನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಮೇ 13ರಿಂದ ಎರಡ್ಮೂರು ದಿನ ಜೋರು ಮಳೆ ಸಾಧ್ಯತೆ ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement