ಅಂಬಾನಿ ಮನೆ ಬಳಿ ನಿಂತಿದ್ದ ಸ್ಫೋಟಕ ಹೊಂದಿದ ಎಸ್‌ಯುವಿ ಪ್ರಕರಣಕ್ಕೆ ದಿನಕ್ಕೊಂದು ತಿರುವು..!

ಮುಂಬೈ: ಕಳೆದ ವಾರ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ನಿಲುಗಡೆ ಮಾಡಿದ್ದ ಸ್ಫೋಟಕ ಹೊಂದಿರುವ ವಾಹನದ ಮಾಲೀಕ ಹಿರೆನ್ ಮನ್ಸುಖ್ ಶುಕ್ರವಾರ ನೆರೆಯ ಥಾಣೆ ಪ್ರದೇಶದ ಕೊಲ್ಲಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ಗೃಹ ಸಚಿವರ ಹೇಳಿಕೆಯಿಂದ ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಈಗ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತ ಸಾಗಿದೆ. ಮತ್ತೊಂದು ಟ್ವಿಸ್ಟ್‌ನಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್‌ ಮೃತ ವಾಹನದ ನಿಜವಾದ ಮಾಲೀಕರಲ್ಲ ಎಂದು ಹೇಳಿದ್ದಾರೆ.
ಸುಮಾರು 45 ವರ್ಷ ವಯಸ್ಸಿನ ಮನ್ಸುಖ್ ಗುರುವಾರ ರಾತ್ರಿ ಅವರ ಕುಟುಂಬದ ಪ್ರಕಾರ ನಾಪತ್ತೆಯಾಗಿದ್ದಾರೆ. ಮುಂಬ್ರಾ ರೆತಿ ಬಂಡರ್ ರಸ್ತೆಯ ಸಮುದ್ರದ ದಡದಲ್ಲಿ ಶವ ಪತ್ತೆಯಾಗಿದೆ ಎಂದು ಥಾಣೆ ಪೊಲೀಸರ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಫೆಬ್ರವರಿ 25 ರಂದು ದಕ್ಷಿಣ ಮುಂಬೈನ ಅಂಬಾನಿಯ ಬಹುಮಹಡಿ ನಿವಾಸವಾದ `ಆಂಟಿಲಿಯಾ ‘ಬಳಿ ಜೆಲೆಟಿನ್ ಹೊಂದಿರುವ ಮನ್ಸುಖ್‌ನ ಸ್ಕಾರ್ಪಿಯೋ ಪತ್ತೆಯಾಗಿತ್ತು. ಫೆಬ್ರವರಿ 18 ರಂದು ಇದನ್ನು ಏರೋಲಿ-ಮುಲುಂಡ್ ಸೇತುವೆಯಿಂದ ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಮುಂಬೈ ಪೊಲೀಸರ ಅಪರಾಧ ವಿಭಾಗವು ಈ ಪ್ರಕರಣದಲ್ಲಿ ಮನ್ಸುಖ್ ಅವರ ಹೇಳಿಕೆಯನ್ನು ದಾಖಲಿಸಿತ್ತು. ಎಸ್‌ಯುವಿ ಕಳವು ಮಾಡಿದ ನಂತರ ತಾನು ಪೊಲೀಸ್ ದೂರು ನೀಡಿದ್ದೇನೆ ಎಂದು ವಾಹನ ಬಿಡಿಭಾಗಗಳ ವ್ಯವಹಾರದಲ್ಲಿದ್ದ ಮನ್ಸುಖ್ ಹೇಳಿದ್ದರು. ಶುಕ್ರವಾರ ಮನ್ಸುಖ್‌ ಕುಟುಂಬ ಸದಸ್ಯರು ಮನ್ಸುಖ್‌ ನಾಪತ್ತೆಯಾಗಿದ್ದಾರೆ ಎಂದು ಥಾಣೆಯ ನೌಪಾಡಾ ಪೊಲೀಸ್ ಠಾಣೆ ಸಂಪರ್ಕಿಸಿದ್ದರು.ನಂತರ ಮನ್ಸುಖ್‌ ಶವ ಸಮುದ್ರ ತೀರದಲ್ಲಿ ಶವವಾಗಿ ಪತ್ತೆಯಾಗಿದೆ.ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಥಾಣೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್, ಪ್ರಧಾನ ಸಾಕ್ಷಿಯ ಸಾವು ಅಲ್ಲಿ ಏನೋ ನಡೆದಿದೆ ಎಂಬುದನ್ನು ತೋರಿಸುತ್ತದೆ. ಹೀಗಾಗಿ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಬೇಕು ಒತ್ತಾಯಿಸಿದ್ದರು. ಇದಕ್ಕೂ ಮೊದಲು, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತನಿಖೆಗಾಗಿ ಫಡ್ನವೀಸ್ ರಾಜ್ಯ ವಿಧಾನಸಭೆಯಲ್ಲಿ ಈ ವಿಷಯ ಎತ್ತಿದ್ದರು.
ಮನ್ಸುಖ್ ಅವರ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ ಎಂದು ಗೃಹ ಸಚಿವ ದೇಶ್ಮುಖ್ ಹೇಳಿದ್ದಾರೆ. ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದು, ಮಹಾರಾಷ್ಟ್ರ ಪೊಲೀಸರು ಪ್ರಕರಣದ ತನಿಖೆ ನಡೆಸಲು ಸಂಪೂರ್ಣ ಸಮರ್ಥರಾಗಿದ್ದಾರೆ ಎಂದು ಅವರು ಹೇಳಿದರು.
ಕೆಲವು ಆಂತರಿಕ ಕೆಲಸಗಳಿಗಾಗಿ ಎಸ್‌ಯುವಿ ಮೂಲ ಮಾಲೀಕರು ಅದನ್ನು ಮನ್ಸುಖ್‌ಗೆ ಒಪ್ಪಿಸಿದ್ದರು ಎಂದು ಗೃಹ ಸಚಿವರು ಹೇಳಿದರು.
ಮನ್ಸುಖ್ ಅವರು ಮಾಲೀಕರು ಎಂದು ಪೊಲೀಸರಿಗೆ ತಿಳಿಸಿದ್ದರಿಂದ ಈ ಪ್ರಕರಣದ ಬಗ್ಗೆ ದೇಶ್ಮುಖ್ ಅವರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ.ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಅವರು ವ್ಯಕ್ತಿಯು ಸತ್ಯ ಹೇಳುವುದು ಅನಿವಾರ್ಯವಲ್ಲ ಎಂದು ಹೇಳಿದರು. “ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿ. ಅವರಿಗೆ ಸ್ವಲ್ಪ ಸಮಯ ನೀಡಿ ಮತ್ತು ಅವರ ಮೇಲೆ ನಂಬಿಕೆ ಇರಲಿ” ಎಂದು ಪರಬ್ ಹೇಳಿದರು, ಎನ್ಐಎ ಈಗಾಗಲೇ ಸಮಾನಾಂತರ ತನಿಖೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮೂರನೇ ಹಂತದಲ್ಲಿ ಅಂದಾಜು 64.4%ರಷ್ಟು ಮತದಾನ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement