ದೂರು ವಾಪಸ್‌, ಸರ್ಕಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬಹುದು: ಎಚ್‌ಡಿಕೆ

ಕೋಲಾರ: ದಿನೇಶ್ ಕಲ್ಹಳ್ಳಿ ಯಾವ ಕಾರಣಕ್ಕಾಗಿ ದೂರು ಹಿಂಪಡೆದಿದ್ದಾರೆ ಎಂಬುದು ತಿಳಿದಿಲ್ಲ. ಮಾಜಿ ಮುಖ್ಯಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ಸರ್ಕಾರಕ್ಕೆ ಹೊಣೆಗಾರಿಕೆಯಿದ್ದು, ಸರ್ಕಾರವೇ ಈ ಪ್ರಕರಣದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಬಹುದು. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅಸಹ್ಯಕರ ಘಟನೆಗಳು‌ ನಡೆಯುತ್ತಿವೆ. ಸರ್ಕಾರವು ಜನತೆಗೆ ವಿಶ್ವಾಸ ಮೂಡಿಸುವ‌ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ದಿನೇಶ ಕಲ್ಹಳ್ಳಿ ಯಾಕೆ ದೂರು ವಾಪಸ್‌ ಪಡೆದಿದ್ದಾರೆ. ವಾಪಸ್‌ ಪಡೆಯಲು ಯಾರು ಪ್ರೇರಣೆ ಎಂದು ಮೊದಲು ತಿಳಿದುಕೊಳ್ಳಬೇಕು. ಅನ್ಯಾಯಕ್ಕೊಳಗಾದ ಮಹಿಳೆ ಯಾಕೆ ಹೊರಗೆ ಬಂದಿಲ್ಲ. ಯಾವ ಕಾರಣಕ್ಕೆ ಈ ಪ್ರಕರಣ ಹೊರ ಬಂದಿದೆ. ಈ ದೂರಿನ ಹಿಂದಿನ ಸತ್ಯಾಂಶವೇನು? ಎಂಬಿತ್ಯಾದಿ ಸಂಗತಿಗಳು ಸಾರ್ವಜನಿಕವಾಗಬೇಕಿದೆ ಎಂದು ಅವರು ಹೇಳಿದ್ದಾರೆ.

 

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement