ಸ್ವಿಟ್ಜರ್‌ಲ್ಯಾಂಡ್‌ :ಜನಮತ ಗಣನೆಯಲ್ಲಿ ಬುರ್ಖಾ ನಿಷೇಧ ಪ್ರಸ್ತಾಪಕ್ಕೆ ಜಯ

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಬುರ್ಖಾ ಅಥವಾ ಪರದೆ ನಿಷೇಧಿಸುವ ಪ್ರಸ್ತಾಪವು ಭಾನುವಾರ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅಲ್ಪಮತದಿಂದ ಜಯ ಗಳಿಸಿತು.
ಶೇ.51.2-48.8 ಅಂತರದಿಂದ ಅಂಗೀಕರಿಸಲ್ಪಟ್ಟು ಸ್ವಿಸ್ ಸಂವಿಧಾನ ತಿದ್ದುಪಡಿ ಮಾಡುವ ಕ್ರಮಕ್ಕೆ ಬೆಂಬಲಿಸಿದೆ.ನೇರ ಪ್ರಜಾಪ್ರಭುತ್ವದ ಸ್ವಿಸ್ ವ್ಯವಸ್ಥೆಯಡಿಯಲ್ಲಿನ ಪ್ರಸ್ತಾಪವು ಇಸ್ಲಾಂ ಧರ್ಮವನ್ನು ನೇರವಾಗಿ ಉಲ್ಲೇಖಿಸುವುದಿಲ್ಲ ಮತ್ತು ಹಿಂಸಾತ್ಮಕ ಬೀದಿ ಪ್ರತಿಭಟನಾಕಾರರನ್ನು ,ಮುಖವಾಡ ಧರಿಸುವುದನ್ನು ತಡೆಯುವ ಗುರಿ ಹೊಂದಿದೆ, ಆದರೂ ಸ್ಥಳೀಯ ರಾಜಕಾರಣಿಗಳು, ಮಾಧ್ಯಮಗಳು ಮತ್ತು ಪ್ರಚಾರಕರು ಇದನ್ನು ಬುರ್ಕಾ ನಿಷೇಧ ಎಂದು ಕರೆದಿದ್ದಾರೆ.
ಸ್ವಿಟ್ಜರ್ಲೆಂಡ್ನಲ್ಲಿ, ನೀವು ನಿಮ್ಮ ಮುಖವನ್ನು ತೋರಿಸುವುದು ನಮ್ಮ ಸಂಪ್ರದಾಯ. ಅದು ನಮ್ಮ ಮೂಲಭೂತ ಸ್ವಾತಂತ್ರ್ಯದ ಸಂಕೇತವಾಗಿದೆ” ಎಂದು ಜನಾಭಿಪ್ರಾಯ ಸಮಿತಿಯ ಅಧ್ಯಕ್ಷ ಮತ್ತು ಸ್ವಿಸ್ ಪೀಪಲ್ಸ್ ಪಾರ್ಟಿಯ ಸಂಸತ್ ಸದಸ್ಯ ವಾಲ್ಟರ್ ವೋಬ್ಮನ್ ಮತದಾನದ ಮೊದಲು ಹೇಳಿದ್ದಾರೆ.
ಸ್ವಿಟ್ಜರ್ಲೆಂಡ್‌ನ ಸೆಂಟ್ರಲ್ ಕೌನ್ಸಿಲ್ ಆಫ್ ಮುಸ್ಲಿಮ್‌ ಈ ಮತವನ್ನು ಸಮುದಾಯಕ್ಕೆ ಕರಾಳ ದಿನವೆಂದು ಕರೆದಿದೆ.
2011 ರಲ್ಲಿ ಫ್ರಾನ್ಸ್ ಸಾರ್ವಜನಿಕವಾಗಿ ಪೂರ್ಣ ಮುಖದ ಮುಸುಕು ಧರಿಸುವುದನ್ನು ನಿಷೇಧಿಸಿತ್ತು. ಮತ್ತು ಡೆನ್ಮಾರ್ಕ್, ಆಸ್ಟ್ರಿಯಾ, ನೆದರ್ಲ್ಯಾಂಡ್ಸ್ ಮತ್ತು ಬಲ್ಗೇರಿಯಾ ಸಾರ್ವಜನಿಕವಾಗಿ ಮುಖದ ಮುಸಕು ಧರಿಸುವುದನ್ನು ಪೂರ್ಣ ಅಥವಾ ಭಾಗಶಃ ನಿಷೇಧಿಸಿದೆ.

ಪ್ರಾಯೋಗಿಕವಾಗಿ ಸ್ವಿಟ್ಜರ್ಲೆಂಡ್ನಲ್ಲಿ ಯಾರೂ ಬುರ್ಖಾ ಧರಿಸುವುದಿಲ್ಲ ಮತ್ತು ಸುಮಾರು 30 ಮಹಿಳೆಯರು ಮಾತ್ರ ನಿಕಾಬ್ ಧರಿಸುತ್ತಾರೆ ಎಂದು ಲುಸೆರ್ನ್ ವಿಶ್ವವಿದ್ಯಾಲಯವು ಅಂದಾಜಿಸಿದೆ. 8.6 ಮಿಲಿಯನ್ ಜನಸಂಖ್ಯೆಯ ಸ್ವಿಸ್ ಜನಸಂಖ್ಯೆಯ ಮುಸ್ಲಿಮರು 5% ರಷ್ಟಿದ್ದಾರೆ, ಹೆಚ್ಚಿನವರು ಟರ್ಕಿ, ಬೋಸ್ನಿಯಾ ಮತ್ತು ಕೊಸೊವೊದ ಮೂಲದವರು.
ನಿಷೇಧದ ನಂತರ, ಬಹುಪಾಲು ಸ್ವಿಸ್ ಮತದಾರರು ಒಂದೇ ಧಾರ್ಮಿಕ ಸಮುದಾಯದ ವಿರುದ್ಧ ತಾರತಮ್ಯವನ್ನುಂಟು ಮಾಡುವ ಮತ್ತು ಭಯ ಮತ್ತು ವಿಭಜನೆಯನ್ನು ಅನಗತ್ಯವಾಗಿ ಪ್ರಚೋದಿಸುವ ಉಪಕ್ರಮವನ್ನು ಮತ್ತೊಮ್ಮೆ ಬೆಂಬಲಿಸಿದ್ದಾರೆ” ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳಿದೆ.

 

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement