ಚುನಾವಣೆ ಹೊಸ್ತಿಲಲ್ಲಿ ಮತ್ತೆ ಐವರು ಟಿಎಂಸಿ ಶಾಸಕರು ಬಿಜೆಪಿಗೆ ಸೇರ್ಪಡೆ…!

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಸಮೀಪಿಸತ್ತಿದ್ದಂತೆಯೇ ಮಮತಾ ಬ್ಯಾನರ್ಜಿಗೂ ತಲೆನೋವು ಜಾಸ್ತಿಯಾಗುತ್ತಿದೆ. ಚುನಾವಣೆಯ ಹೊಸ್ತಿಲಲ್ಲಿಯೇ ಪಕ್ಷದ ಐವರು ಶಾಸಕರು ತೃಣಮೂಲ ಕಾಂಗ್ರೆಸ್‌ ತೊರೆದು ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಬಿಜೆಪಿ ಸೇರಿದ್ದಾರೆ. ಅದೂ ಪ್ರಧಾನಿ ಮೋದಿ ನಡೆಸಿದ ಮಹಾ ಸಾವೇಶದ ಮಾರನೇ ದಿನವೇ..!
ಟಿಎಂಸಿಯ ಐವರು ಶಾಸಕರು ಸೋಮವಾರ ಬಿಜೆಪಿ ಸೇರಿದ್ದು, ಇದರೊಂದಿಗೆ ಮಾಲ್ಡಾ ಜಿಲ್ಲಾ ಪರಿಷದ್‌ ಮೇಲಿನ ತನ್ನ ನಿಯಂತ್ರಣವನ್ನು ಸಹ ಟಿಎಂಸಿ ಕಳೆದುಕೊಂಡಂತಾಗಿದೆ.
80 ವರ್ಷದ ರವೀಂದ್ರನಾಥ್‌ ಭಟ್ಟಾಚಾರ್ಯ, ಮಮತಾ ಬ್ಯಾನರ್ಜಿ ಆಪ್ತೆ ಶಾಸಕಿ ಸೋನಾಲಿ ಗುಹಾ, 85 ವರ್ಷದ ಜತು ಲಹಿರಿ, ಮಾಜಿ ಫುಟ್ಬಾಲ್‌ ಆಟಗಾರ ದೀಪೇಂದು ಬಿಸ್ವಾಸ್‌ ಹಾಗೂ ಶೀತಲ್‌ ಸರ್ದಾರ್‌ ಸೋಮವಾರ ಬಿಜೆಪಿ ಸೇರಿದ್ದಾರೆ. ಕೈಗಾರಿಕೆಗಾಗಿ ಸಿಂಗೂರ್‌ನಲ್ಲಿ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಚಳವಳಿಯಲ್ಲಿ ರವೀಂದ್ರನಾಥ್‌ ಭಟ್ಟಾಚಾರ್ಯ ಮುಂಚೂಣಿಯಲ್ಲಿದ್ದರು.ಇದು ಮಮತಾ ಬ್ಯಾನರ್ಜಿಗೆ ದೊಡ್ಡ ಶಾಕ್‌ ಎಂದೇ ಪರಿಗಣಿಸಲಾಗುತ್ತಿದೆ. ಜೊತೆಗೆ ಇನ್ನೂ ಅನೇಕರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement