ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಟೈಮ್ಸ್ ನೌ-ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ಸಮೀಕ್ಷೆ ಪ್ರಕಾರ, 294 ಸದಸ್ಯರ ವಿಧಾನಸಭೆಯಲ್ಲಿ ಟಿಎಂಸಿ ಸುಮಾರು 146 ರಿಂದ 162 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, 2016 ರ ವಿಧಾನಸಭಾ ಚುನಾವಣೆಯಲ್ಲಿ ಬ್ಯಾನರ್ಜಿಯವರ ಪಕ್ಷವು ಗೆದ್ದ 211 ಸ್ಥಾನಗಳಿಸಿತ್ತು. ಈಗ ಅದಕ್ಕೆ ಸುಮಾರು ೬೦ರಿಂದ ೬೫ ಸ್ತಾನಗಳು ಕಡಿಮೆಯಾಗುವ ನಿರೀಕ್ಷೆಯಿದೆ.
ನಿಸ್ಸಂದೇಹವಾಗಿ ಆಡಳಿತಾರೂಢ ಟಿಎಂಸಿಗೆ ಮುಖ್ಯ ಸವಾಲು ಬಿಜೆಪಿಯಿಂದ ಎದುರಾಗಿದ್ದು, ಬಿಜೆಪಿ 99 ರಿಂದ 115 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ. ವಿಶೇಷವೆಂದರೆ, 2016 ರ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷ ಕೇವಲ ಮೂರು ಸ್ಥಾನಗಳನ್ನು ಗೆದ್ದಿತ್ತು.
ಕಾಂಗ್ರೆಸ್,ಎಡ ರಂಗ ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಮೈತ್ರಿಕೂಟವು ಸುಮಾರು 29 ರಿಂದ 37 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಎಡ-ಕಾಂಗ್ರೆಸ್ ಮೈತ್ರಿ 2016 ರಲ್ಲಿ 74 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿದ್ದರೆ, ಸಿಪಿಐ (ಎಂ) 26 ಸ್ಥಾನಗಳನ್ನು ಗಳಿಸಿತ್ತು.
ಚುನಾವಣೆಗೆ ಇನ್ನು ಒಂದು ತಿಂಗಳಿದ್ದು ಟಿಎಂಸಿಯಿಂದ ಬಿಜೆಪಿಗೆ ಸಮೀಕ್ಷೆ ಮಧ್ಯೆಯೇ ವಲಸೆ ಆರಂಭವಾಗಿದೆ. ಹೀಗಾಗಿ ಟಿಎಂಸಿ ಹಾಗೂ ಬಿಜೆಪಿ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿರುವ ಪಶ್ಚಿಮ ಬಂಗಾಳದಲ್ಲಿ ಎಡ ಹಾಗೂ ಕಾಂಗ್ರೆಸ್ ಮೈತ್ರಿ ಕೂಟಗಳು ಪಡೆಯುವ ಮತಗಳು ಟಿಎಂಸಿ-ಬಿಜೆಪಿ ಪಾಲಿಗೆ ನಿರ್ನಾಯಕ ಆಗಬಹುದು.
ನಿಮ್ಮ ಕಾಮೆಂಟ್ ಬರೆಯಿರಿ