ಸಾಂದರ್ಭಿಕ ಚಿತ್ರ

ಯಲ್ಲಾಪುರ: ಗುಡ್ಡ ಕುಸಿದು ನಾಲ್ವರು ಕಾರ್ಮಿಕರ ಸಾವು

ಸಾಂದರ್ಭಿಕ ಚಿತ್ರ

ಕಾರವಾರ: ತೋಟದ ಮಣ್ಣಿನ ಕೆಲಸ ಮಾಡುವಾಗ ಆಕಸ್ಮಾತ್‌ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ  ಯಲ್ಲಾಪುರ ತಾಲೂಕಿನ ಇಡಗುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.
ಇಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂತೇಬೈಲ್‌ ಮಂಜುನಾಥ ಭಟ್‌ ಅವರ ಮಾಲೀಕತ್ವದ ತೋಟಕ್ಕೆ ಮಣ್ಣು ತೆಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತೋಟಕ್ಕೆಂದು ಮಣ್ಣು ತೆಗೆಯಲು ಒಟ್ಟು ಏಳು ಕಾರ್ಮಿಕರು ತೆರಳಿದ್ದರು ಎಂದು ವರದಿಯಾಗಿದೆ.
ಗುಡ್ಡದ ಭಾಗದ ಧರೆ ಅಗೆದು ಮಣ್ಣು ತುಂಬಿಸುತ್ತಿದ್ದಾಗ ಗುಡ್ಡದ ಭಾಗವು ಹಠಾತ್‌ ಕುಸಿದು ಕಾರ್ಮಿಕರ ಮೇಲೆಯೇ ಕುಸಿದು ಬಿದ್ದ ಪರಿಣಾಮ ಅದರಡಿ ಸಿಲುಕಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಮೃತರನ್ನು ಯಲ್ಲಾಪುರ ತಾಲೂಕಿನ ಕಿರವತ್ತಿ ಸಮೀಪದ ಗೌಳಿವಾಡದ ನಿವಾಸಿಗಳಾದ ಲಕ್ಷ್ಮೀ ಡೋಯಿಪಡೆ (೩೮), ಸಂತೋಷ ಡೋಯಿಪಡೆ (೧೮), ಬಾಗ್ಯಶ್ರೀ ಎಡಗೆ (೨೧) ಹಾಗೂ ಮಾಳು ಡೋಯಿಪಡೆ (೨೧) ಎಂದು ಗುರುತಿಸಲಾಗಿದೆ.
ಬೀರು, ಇನ್ನು ತೆಗ್ಗಿಬಾಯಿ ಹಾಗೂ ಸೋನಿ ಎನ್ನುವವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಯಲ್ಲಾಪುರ ಮಾಹಿತಿ ಸಿಕ್ಕ ತಕ್ಷಣವೇ ಯಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ,ಶವವನ್ನು ಹೊರ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು: ಕುದುರೆಯೊಂದರಲ್ಲಿ ಗ್ಲಾಂಡರ್ಸ್ ರೋಗ ಪತ್ತೆ ; ಡಿಜಿ ಹಳ್ಳಿ ನಿಷೇಧಿತ ವಲಯವೆಂದು ಘೋಷಣೆ

3.6 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement