ರಾಜ್ಯ ಬಜೆಟ್‌ ಪ್ರಮುಖ ಹೈಲೈಟ್‌ಗಳು

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು, ೨೦೨೧-೨೨ನೇ ಸಾಲಿಗಾಗಿ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ೨,೪೩,೭೩೪ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ.
ಮಂಕು ತಿಮ್ಮನ ಕಗ್ಗದ ‘ಕಲ್ಲಾಗು ಬೆಟ್ಟದಡಿ ಮನದಿ ಮಲ್ಲಿಗೆಯಾಗು.’ಸಾಲುಗಳನ್ನು ಸ್ಮರಿಸಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ ಮಂಡಿಸಿದರು.
ಒಟ್ಟು ಸ್ವೀಕೃತಿ- 2,43,734 ಕೋಟಿ ರೂ.; ರಾಜಸ್ವ ಸ್ವೀಕೃತಿ- 1,72,271 ಕೋಟಿ ರೂ.; ಸಾರ್ವಜನಿಕ ಋಣ 71,332 ಕೋಟಿ ರೂ. ಮತ್ತು ಬಂಡವಾಳ ಸ್ವೀಕೃತಿ 71,463 ಕೋಟಿ ರೂ., ಒಟ್ಟು ವೆಚ್ಚ- 2,46,207 ಕೋಟಿ ರೂ.; ರಾಜಸ್ವ ವೆಚ್ಚ – 1,87,405 ಕೋಟಿ ರೂ.; ಬಂಡವಾಳ ವೆಚ್ಚ 44,237 ಕೋಟಿ ರೂ. ಹಾಗೂ ಸಾಲ ಮರುಪಾವತಿ 14,565 ಕೋಟಿ ರೂ.
೨೦೨೧-೨೨ನೇ ಸಾಲಿನ ಬಜೆಟ್ ಮುಖ್ಯಾಂಶಗಳು
*ಒಟ್ಟಾರೆ ಕೃಷಿ ವಲಯಕ್ಕೆ 31,021 ಕೋಟಿ ರೂಪಾಯಿ ಅನುದಾನ
* ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು ಮೊತ್ತಕ್ಕೆ 21,474 ಕೋಟಿ ರೂ ಆಡಳಿತಾತ್ಮಕ ಅನುಮೋದನೆ
* ಕೃಷ್ಣಾ ಭಾಗ್ಯ ಜಲನಿಗಮಕ್ಕೆ 5600 ಕೋಟಿ ರೂ ಅನುದಾನ
* ಬೆಂಗಳೂರು ಸಮಗ್ರ ಅಭಿವೃದ್ಧಿಗೆ 7795 ಕೋಟಿ ರೂ ಅನುದಾನ
* ಮಹದಾಯಿ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ 1677 ಕೋಟಿ ರೂಪಾಯಿ ಅನುದಾನ
* ಬೆಂಗಳೂರು ಹೆಸರಘಟ್ಟದಲ್ಲಿ 100 ಎಕರೆ ಥೀಮ್ ಪಾರ್ಕ್ ನಿರ್ಮಾಣ
* ಬೆಂಗಳೂರು ಉಪನಗರ ರೈಲು ಯೋಜನೆಗೆ 850 ಕೋಟಿ ರೂ ಮೀಸಲು
* ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200 ಕೋಟಿ ಅನುದಾದ
* ಫ್ಲ್ಯಾಟ್ ಗಳ ಮುದ್ರಾಂಕ ಶುಲ್ಕ ಶೇ.5ರಿಂದ ಶೇ.3ಕ್ಕೆ ಇಳಿಕೆ
* ಪೆಟ್ರೋಲ್-ಡೀಸೆಲ್ ದರ ಯಥಾಸ್ಥಿತಿ ಮುಂದುವರಿಕೆ
* ಗೋಹತ್ಯೆ ತಡೆಯಲು ಜಿಲ್ಲೆಗೊಂದು ಗೋಶಾಲೆ ನಿರ್ಮಾಣ
* ಅಂತರಾಷ್ಟ್ರೀಯ ಮಹಿಳಾದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಭರ್ಜರಿ ಗಿಫ್ಟ್- 2 ಕೋಟಿ ರೂಪಾಯಿವರೆಗೆ ಸಾಲ ಸೌಲಭ್ಯ
* ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್
* ಬೆಂಗಳೂರಿನಲ್ಲಿ ನಿರ್ಭಯಾ ಯೋಜನೆಯಡಿ 7500, ಮಹಿಳೆಯರಿಗೆ ಗೋದಾಮು, ಅಂಗಡಿ ನಿರ್ಮಾಣಕ್ಕೆ ಸಹಾಯ ಸೇರಿ ವಿವಿಧ ಯೋಜನೆ
* ರಾಜ್ಯದಲ್ಲಿ ಹೊಸದಾಗಿ 52 ಬಸ್ ಸ್ಟ್ಯಾಂಡ್ ಸ್ಥಾಪನೆ ಘೋಷಣೆ
* ಜಿಲ್ಲಾ ಕೇಂದ್ರಗಳಲ್ಲಿ ಮೆಟ್ರಿಕ್ ನಂತರದ 50 ಹಾಸ್ಟೆಲ್ ಸ್ಥಾಪನೆ ಮಾಡಲು 50 ಕೋಟಿ ರೂ ಅನುದಾನ
* ರಾಜ್ಯದಲ್ಲಿ 4 ವಿಭಾಗಗಳಲ್ಲಿ ಮುರಾರ್ಜಿ ವಸತಿ ಶಾಲೆ ಆರಂಭ
* 100 ಕಿತ್ತೂರು ರಾಣಿ ಶಿಶುಪಾಲನಾ ಕೇಂದ್ರ ಸ್ಥಾಪನೆ
* ಎಸ್.ಎಲ್ ಭೈರಪ್ಪನವರ ಪರ್ವ ನಾಟಕ ಪ್ರದರ್ಶನಕ್ಕೆ ಬಜೆಟ್ ನಲ್ಲಿ ಕೋಟಿ ಮೀಸಲು
* ನಂದಿ ಗುರ್ಗ್ ಮೇಕೆ ತಳಿಗಳ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ
* ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನಲ್ಲಿ 2 ಕೋಟಿ ವೆಚ್ಚದಲ್ಲಿ ಆಯುರ್ವೇದ ಔಷದಿ ಅಳವಡಿಕೆ ಕೇಂದ್ರ ಸ್ಥಾಪನೆ
* ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ 2 ಕೋಟಿ ಅನುದಾನ
* ಮಂಡ್ಯ ನಗರ ಕ್ರೀಡಾಂಗಣ ಉನ್ನತೀಕರಣಕ್ಕೆ 10 ಕೋಟಿ
* ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಶಾಲೆಗೆ 2 ಕೋಟಿ
* ಪ್ರವಾಸಿ ತಾಣಗಳ ಮೂಲ ಸೌಕರ್ಯಕ್ಕೆ 500 ಕೋಟಿ
* ಕಬಿನಿ ಡ್ಯಾಮ್ ಕೆಳಭಾಗ ಪಾರ್ಕ್ ಸ್ಥಾಪನೆಗೆ 50 ಕೋಟಿ
*ಶಿರಸಿಯಲ್ಲಿ ವಿಜ್ಞಾನ ಕೇಂದ್ರಕ್ಕೆ 7 ಕೋಟಿ ರೂ.
* ಪೀರಿಯನ್ಸ್ ಬೆಂಗಳೂರು ಕೇಂದ್ರ ಸ್ಥಾಪನೆ
* ರಾಜ್ಯದಲ್ಲಿ 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರ ಸ್ಥಾಪನೆ
* ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣಕ್ಕೆ 10 ಕೋಟಿ ಅನುದಾನ
* ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ 10 ಕೋಟಿ ಮೀಸಲು
ಕಾಂಗ್ರೆಸ್ ವಿರೋಧದ ನಡುವೆಯೇ ಬಜೆಟ್ ಮಂಡನೆ; ಕೈ ಸದಸ್ಯರ ಸಭಾತ್ಯಾಗ ಮಾಡಿದರು. ಹಾಗೂ ಬಿಜೆಪಿಯಿಂದ ಜೈ ಶ್ರೀರಾಮ್ ಘೋಷಣೆ ಕೂಗಲಾಯಿತು.

ಪ್ರಮುಖ ಸುದ್ದಿ :-   ಬೆಳಗಾವಿ | ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ; ಮೇಖಳಿಯ ಲೋಕೇಶ್ವರ ಸ್ವಾಮೀಜಿ ಬಂಧನ

 

3.9 / 5. 7

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement