ಶೀಘ್ರದಲ್ಲೇ ರಾಜ್ಯ ಖನಿಜ ನೀತಿ  ಜಾರಿ: ಬಜೆಟ್‍ನಲ್ಲಿ ಘೋಷಣೆ 

ಬೆಂಗಳೂರು” ಗಣಿಗಾರಿಕೆ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ  ರಾಷ್ಟ್ರೀಯ ಖನಿಜ ನೀತಿಗೆ ಅನುಗುಣವಾಗಿ  ರಾಜ್ಯ ಸರ್ಕಾರವು 2021-26ನೇ ಸಾಲಿನ  ರಾಜ್ಯ ಖನಿಜ ನೀತಿ ಜಾರಿ ಮಾಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು, ನಮ್ಮ ಸರ್ಕಾರವು 2008ರಲ್ಲಿಯೇ ಖನಿಜ ನೀತಿ ಜಾರಿಗೆ ತಂದಿತ್ತು. ಇದೀಗ ಈ ಇಲಾಖೆಯಲ್ಲಿ ಇನ್ನಷ್ಟು ಸುಧಾರಣೆ ತರಬೇಕೆಂಬುದು ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ. ರಾಷ್ಟ್ರೀಯ ಖನಿಜ ಕಾರ್ಯ ನೀತಿಗೆ ಸಮನಾಗಿ 2021-26ನೇ ಸಾಲಿನ ರಾಜ್ಯ ಖನಿಜ ನೀತಿ ರೂಪಿಸಲಿದ್ದೇವೆ ಎಂದು ಪ್ರಕಟಿಸಿದರು.
ಗಣಿ/ಕಲ್ಲು ಗಣಿ ಗುತ್ತಿಗೆ ಮತ್ತು  ಕ್ರಷರ್ ಲೈಸೆನ್ಸ್ ಕೋರಿ ಸಲ್ಲಿಸುವ ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡುವ ಸದುದ್ದೇಶದಿಂದ ಇದೇ ಮೊದಲ ಬಾರಿಗೆ ಏಕಗವಾಕ್ಷಿ ಪದ್ದತಿ ಜಾರಿ ಮಾಡಲಾಗುವುದು. ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಏಕಗವಾಕ್ಷಿ ಯೋಜನೆಯಡಿ ಗಣಿ ಅದಾಲತ್‍ಗಳನ್ನು ಪ್ರಾರಂಭಿಸಲಾಗುವುದು ಎಂದು ಅಭಿಪ್ರಾಯಪಟ್ಟರು.
ಗಣಿ ಅದಾಲತ್‍ಗಳನ್ನು ಕಂದಾಯ ವಿಭಾಗಗಳಲ್ಲಿ ಪ್ರಾರಂಭ ಮಾಡುವುದರಿಂದ  ಉದ್ಯಮಿಗಳು ಇಲಾಖೆಯಿಂದ ಇಲಾಖೆಗೆ ಅಲೆಯುವುದು ತಪ್ಪಿದಂತಾಗುತ್ತದೆ. ಈಗಾಗಲೇ ಇಲಾಖೆಯು ಕಾರ್ಯೋನ್ಮುಖವಾಗಿದ್ದು, ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಎಂದು ಸಿಎಂ ಹೇಳಿದರು.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement