ಗಣಿಗಾರಿಕೆ ಲೈಸೆನ್ಸ್ ನೀಡಲು ಆನ್‍ಲೈನ್-ಆಫ್‍ಲೈನ್‌ ವ್ಯವಸ್ಥೆ ಜಾರಿ:ನಿರಾಣಿ

ಧಾರವಾಡ: ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ಶೀಘ್ರದಲ್ಲಿ ಲೈಸೆನ್ಸ್(ಪರಾವನಗಿ) ನೀಡಲು ಅನುಕೂಲವಾಗುವಂತೆ ಆನ್‍ಲೈನ್ ಮತ್ತು ಆಫ್‍ಲೈನ್ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಗಣಿ ಮತ್ತು  ಭೂ ವಿಜ್ಞಾನ ಸಚಿವ  ಮುರುಗೇಶ್ ನಿರಾಣಿ ಶುಕ್ರವಾರ ಪ್ರಕಟಿಸಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ  ಪ್ರಗತಿ ಪರಿಶೀಲನಾ ಸಭೆ  ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಫ್‍ಲೈನ್, ಆನ್‍ಲೈನ್ ಜಾರಿ … Continued

ಶೀಘ್ರದಲ್ಲೇ ರಾಜ್ಯ ಖನಿಜ ನೀತಿ  ಜಾರಿ: ಬಜೆಟ್‍ನಲ್ಲಿ ಘೋಷಣೆ 

ಬೆಂಗಳೂರು” ಗಣಿಗಾರಿಕೆ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ  ರಾಷ್ಟ್ರೀಯ ಖನಿಜ ನೀತಿಗೆ ಅನುಗುಣವಾಗಿ  ರಾಜ್ಯ ಸರ್ಕಾರವು 2021-26ನೇ ಸಾಲಿನ  ರಾಜ್ಯ ಖನಿಜ ನೀತಿ ಜಾರಿ ಮಾಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು, ನಮ್ಮ ಸರ್ಕಾರವು 2008ರಲ್ಲಿಯೇ ಖನಿಜ ನೀತಿ ಜಾರಿಗೆ ತಂದಿತ್ತು. ಇದೀಗ ಈ … Continued

ಜನಪ್ರತಿನಿಧಿಗಳೇ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲು: ಮಾಜಿ ಸಿಎಂ ಕುಮಾರಸ್ವಾಮಿ ಆರೋಪ

ರಾಜ್ಯದಲ್ಲಿ ಜನಪ್ರತಿನಿಧಿಗಳೇ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಹಲವು ಜನಪ್ರತಿನಿಧಿಗಳೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಚಿಕ್ಕಬಳ್ಳಾಪುರ ಗಣಿಯಲ್ಲಿ ಜಿಲೆಟಿನ್‌ ಸ್ಫೋಟಗೊಂಡಿರುವುದು ಸರಕಾರದ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಸರಕಾರಕ್ಕೆ ಜನರ ಜೀವದ ಬಗ್ಗೆ ಬದ್ಧತೆಯೇ ಇಲ್ಲವಾಗಿದೆ. ಪೊಲೀಸರು ಒಂದು ವಾರದ ಮುಂಚೆಯೇ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಅವರಿಗೆ ಈ ಬಗ್ಗೆ ಮೊದಲೇ … Continued

ಕಾಳೇನಹಳ್ಳಿ ಗಣಿಪ್ರದೇಶ: ೨ ದಿನಗಳೊಳಗೆ ವರದಿಗೆ ನಿರಾಣಿ ಸೂಚನೆ

ಮಂಡ್ಯ:  ಶ್ರೀರಂಗಪಟ್ಟಣ ತಾಲ್ಲೂಕಿನ  ಕಾಳೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗಣಿಪ್ರದೇಶದ ವಸ್ತುಸ್ಥಿತಿ ಕುರಿತಾಗಿ ಎರಡು ದಿನದೊಳಗೆ ಸಮಿತಿಯನ್ನು ರಚಿಸಿ ಸಮಗ್ರ ವರದಿ ನೀಡುವಂತೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಸೋಮವಾರ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾದ ಸುಮಲತಾ ಅಂಬರೀಶ್  ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಇಲಾಖೆಯ ಅಧಿಕಾರಗಳ ಜೊತೆ ತಾಲ್ಲೂಕಿನ … Continued