ಬಜೆಟ್‌ನಲ್ಲಿ ಮೈಸೂರಿಗೆ ಸಿಕ್ಕಿದ್ದು ಚಿಪ್ಪು ಮಾತ್ರ!: ಕೆಪಿಸಿಸಿ ವಕ್ತಾರ ಲಕ್ಷ್ಮಣ ಟೀಕೆ

ಬಜೆಟ್‌ನಲ್ಲಿ ಮೈಸೂರನ್ನು ಕಡೆಗಣಿಸಲಾಗಿದ್ದು, ಈ ಬಾರಿ ಮೈಸೂರಿಗೆ ಸಿಕ್ಕಿದ್ದು ಚಿಪ್ಪು ಮಾತ್ರ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ ಹೇಳಿದ್ದಾರೆ.
ವಿಮಾನ ನಿಲ್ದಾಣ ಹಾಗೂ ರೈಲ್ವೆ ಟರ್ಮಿನಲ್‌ಗೆ ರಾಜ್ಯ ಸರಕಾರದಿಂದ ಹಣ ಬರಲಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದರು, ಆಗ ನಾನು ಬಜೆಟ್‌ನಲ್ಲಿ ಮೈಸೂರಿಗೆ ೧೦೦ ಕೋಟಿ ರೂ. ತರಲಿ ಸಾಕು ಎಂದು ನಾನು ಸವಾಲು ಹಾಕಿದ್ದೆ. ಬಜೆಟ್‌ನಲ್ಲಿ ವಿಮಾನ ನಿಲ್ದಾಣದ ಪ್ರಸ್ತಾಪವೇ ಆಗಿಲ್ಲ. ಹಾಸನ ವಿಮಾನ ನಿಲ್ದಾಣ, ಶಿವಮೊಗ್ಗ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹಣ ನೀಡಿದ್ದಾರೆ. ಸಂಸದ ಪ್ರತಾಪಸಿಂಹ ಕೇವಲ ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದರು.
ಈ ಬಾರಿಯ ಬಜೆಟ್‌ ಮೈಸೂರಿಗೆ ನಿರಾಸೆ ಮೂಡಿಸಿದೆ. ಈ ಭಾಗದ ಸಚಿವರು, ಶಾಸಕರು ೧೫ ಬೇಡಿಕೆಗಳನ್ನು ಸಲ್ಲಿಸಿದ್ದರು. ಸಿಎಂ ಯಡಿಯೂರಪ್ಪ ಒಂದಕ್ಕೂ ಮಾನ್ಯತೆ ನೀಡಿಲ್ಲ. ಯಡಿಯೂರಪ್ಪ ಜಾತಿವಾರು ಬಜೆಟ್‌ ಮಂಡಿಸಿದ್ದಾರೆ ಎಂದು ಮೂದಲಿಸಿದರು.
ಮೈಸೂರು ಭಾಗದ ಬಿಜೆಪಿ ಮುಖಂಡರು ಯಾರೊಬ್ಬರು ಮೈಸೂರಿನ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬಜೆಟ್‌ನಲ್ಲಿ ಮೈಸೂರನ್ನು ಕಡೆಗಣಿಸಿದ ಕುರಿತು ಮುಂದಿನ ದಿನದಲ್ಲಿ ಸ್ಥಳೀಯ ಮುಖಂಡರು ಧ್ವನಿ ಎತ್ತಬೇಕು ಎಂದು ಲಕ್ಷ್ಮಣ್ ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌: ವೀಡಿಯೊ ನೀಡಿದ್ದು ನಾನೇ ಎಂದಿದ್ದ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ...!?

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement