ಪ್ರೊ. ಯು.ಆರ್‌.ರಾವ್‌ಗೆ ಗೂಗಲ್‌‌ “ಡೂಡಲ್” ಗೌರವ

ಉಪಗ್ರಹ ಮನುಷ್ಯ ಎಂದೇ ಖ್ಯಾತರಾಗಿದ್ದ ಪ್ರೊ ಉಡುಪಿ ರಾಮಚಂದ್ರ ರಾವ್‌ (ಯು.ಆರ್‌.ರಾವ್) ಅವರ ೮೯ನೇ ಜನ್ಮದಿನದ ಪ್ರಯುಕ್ತ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಬಾಹ್ಯಾಕಾಶ ವಿಜ್ಞಾನಿಯನ್ನು ಗೌರವಿಸಿದೆ.
ಪ್ರೊ.ಯು.ಆರ್‌. ರಾವ್‌ ಉಡುಪಿಯ ಅದಮಾರಿನಲ್ಲಿ ಜನಿಸಿದ್ದು, ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ್ದಾರೆ. ೧೯೮೪ರಿಂದ ೧೦ ವರ್ಷಗಳ ಕಾಲ ಇಸ್ರೋ ಮುಖ್ಯಸ್ಥರಾಗಿದ್ದ ಅವರು, ಉಪಗ್ರಹ “ಆರ್ಯಭಟʼ ಉಡಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇಸ್ರೊ ಪಿಎಸ್‌ಎಲ್‌ವಿ ಕಾರ್ಯಕ್ರಮಗಳನ್ನುಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಯು.ಆರ್‌. ರಾವ್‌ ಅವರ ಕೊಡುಗೆ ಅನನ್ಯವಾದುದು. ಇವರ ಸಾಧನೆಯನ್ನು ಪರಿಗಣಿಸಿದ ಕೇಂದ್ರ ಸರಕಾರ ಇವರಿಗೆ ಪದ್ಮಭೂಷಣ ಹಾಗೂ ಪದ್ಮವಿಭೂಷಣ ನೀಡಿ ಗೌರವಿಸಿದೆ. ಅಮೆರಿಕದ ಸ್ಯಾಟಲೈಟ್‌ ಹಾಲ್‌ ಆಫ್‌ ಫೇಮ್‌ʼ ಗೆ ಪಾತ್ರರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ರಾವ್‌ ಅವರದಾಗಿದೆ. ಅಮೆರಿಕದ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ನಂತರ ಭಾರತಕ್ಕೆ ಮರಳಿದ್ದ ರಾವ್‌ ಅವರು ೧೯೬೬ರಲ್ಲಿ ಇಸ್ರೊ ಸೇರಿದ್ದರು. ೨೦೧೭ರಲ್ಲಿ ಬೆಂಗಳೂರಿನಲ್ಲಿ ಯು.ಆರ್‌.ರಾವ್‌ ನಿಧನರಾದರು. ಬಾಹ್ಯಾಕಾಶ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯ ಕಾರಣಕ್ಕಾಗಿ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement