ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯವನ್ನು ಬಿಜೆಪಿ-ಜೆಜೆಪಿ ಸರಕಾರ ಸೋಲಿಸಿದೆ.
ಎಲ್ಲ ಕಾಂಗ್ರೆಸ್ ಶಾಸಕರು ಅವಿಶ್ವಾಸ ನಿರ್ಣಯ ಬೆಂಬಲಿಸಿದರೆ, ಬಿಜೆಪಿ-ಜೆಜೆಪಿ ಶಾಸಕರು ಇದರ ವಿರುದ್ಧ ಮತ ಚಲಾಯಿಸಿದರು. ಅವಿಶ್ವಾಸ ನಿರ್ಣಯವನ್ನು ೩೨ ಸದಸ್ಯರು ಬೆಂಬಲಿಸಿದರೆ, ೫೫ ಸದಸ್ಯರು ವಿರೋಧಿಸಿದರು.
ಜೆಜೆಪಿ ಶಾಸಕರಾದ ರಾಮ್ ಕುಮಾರ್ ಗೌತಮ್ ಮತ್ತು ದೇವೇಂದರ್ ಬಬ್ಲಿ ಅವರು ಬಿಜೆಪಿಯಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುವಂತೆ ಜೆಜೆಪಿಯನ್ನು ಕೋರಿ ಸರ್ಕಾರದ ವಿರುದ್ಧ ಮಾತನಾಡಿದರು. ಗೋಪಾಲ್ ಕಂದಾ ಮೈತ್ರಿಕೂಟವನ್ನು ಬೆಂಬಲಿಸಿದರು. ವಿಧಾನಸಭೆ ಪ್ರಸ್ತುತ 88 ಸದಸ್ಯರ ಬಲವನ್ನು ಹೊಂದಿದ್ದು, ಅಧಿಕಾರದಲ್ಲಿರಲು 45 ಸದಸ್ಯರ ಮತಗಳು ಬೇಕಾಗಿದ್ದವು.
ನಿಮ್ಮ ಕಾಮೆಂಟ್ ಬರೆಯಿರಿ