ಮಹಿಳೆಯರು ಜೀನ್ಸ್‌ ಧರಿಸುವುದು, ಪುರುಷರು ಶಾರ್ಟ್ಸ್‌ ಧರಿಸುವುದಕ್ಕೆ ನಿಷೇಧ ಹೇರಿದ ಖಾಪ್‌ ಪಂಚಾಯತ್‌

ಮುಜಫ್ಫರನಗರ: ಉತ್ತರ ಪ್ರದೇಶದ ಮುಜಫ್ಫರನಗರದ ಖಾಪ್‌ ಪಂಚಾಯತ್‌ ಮಹಿಳೆಯರಿಗೆ ಜೀನ್ಸ್‌ ಹಾಗೂ ಪುರುಷರಿಗೆ ಶಾರ್ಟ್ಸ್‌ ಧರಿಸುವುದಕ್ಕೆ ನಿರ್ಬಂಧ ವಿಧಿಸಿದೆ.
ಜೀನ್ಸ್‌ ಉಡುಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿದೆ. ಇದನ್ನು ಧರಿಸದೇ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಬೇಕು ಎಂದು ರಜಪೂತ್‌ ಸಮಾಜದ ಖಾಪ್‌ ಪಂಚಾಯತ್‌ ಹೇಳಿದೆ.
ಮಾರ್ಚ್‌ ೨ರಂದು ಪಂಚಾಯತ್‌ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸಮುದಾಯದ ಮುಖಂಡ ಠಾಕೂರ ಪೂರಣ್‌ ಸಿಂಗ್‌, ಮಹಿಳೆಯರು ಜೀನ್ಸ್‌ ಧರಿಸುವುದನ್ನು ಹಾಗೂ ಪುರುಷರು ಶಾರ್ಟ್ಸ್‌ ಧರಿಸುವುದನ್ನು ನಿಷೇಧಿಸಲಾಗಿದೆ ಎಂದರು.
ಮಹಿಳೆಯರು ಜೀನ್ಸ್‌ ಬದಲಾಗಿ ಸೀರೆ, ಘಾಘ್ರಾ ಅಥವಾ ಸಲ್ವಾರ್‌ ಕಮೀಜ್‌ ಧರಿಸಬೇಕು. ಆಜ್ಞೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಲಾಗುವುದಲ್ಲದೇ ಸಮುದಾಯದಿಂದ ಬಹಿಷ್ಕಾರ ಹಾಕಲಾಗುವುದು ಎಂದು ತಿಳಿಸಿದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಭಾಗವತ ಕಥಾ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ್ದ ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರ ಮಾಡಿದ್ದ ಮತ್ತೊಬ್ಬ ಬಾಲಕ...!

ನಿಮ್ಮ ಕಾಮೆಂಟ್ ಬರೆಯಿರಿ

advertisement