ದಿ.ಸುರೇಶ ಅಂಗಡಿ ತಾಯಿ ಸೋಮವ್ವ ಅಂಗಡಿ ನಿಧನ

ಬೆಳಗಾವಿ: ಕೇಂದ್ರದ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿ (೯೨)ಕೆಕೆಕೊಪ್ಪ ಗ್ರಾಮದ ನಾಗೇರಹಾಳ ಗ್ರಾಮದ ಸ್ವಗೃಹದಲ್ಲಿ ಗುರುವಾರ ಬೆಳಗ್ಗೆ 9.20ಕ್ಕೆ ನಿಧನರಾಗಿದ್ದಾರೆ.
ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದ ನಾಗೇರಹಾಳ ಗ್ರಾಮದವರಾದ ಸೋಮವ್ವ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ ಐವರು ಪುತ್ರರು ಹಾಗೂ ಓರ್ವಪುತ್ರಿ ಇದ್ದಾರೆ. ಕೇಂದ್ರ ಸಚಿವರಾಗಿದ್ದ ತಮ್ಮ ಪುತ್ರ ಸುರೇಶ ಅಂಗಡಿ ಅವರು ಕೊರೊನಾಕ್ಕೆ ತುತ್ತಾಗಿ ಇತ್ತೀಚಿಗೆ ನಿಧನರಾದ ನಂತರ ಸೋಮವ್ವ ತಮ್ಮ ಪುತ್ರನ ಅಕಾಲಿಕ ನಿಧನದಿಂದ ಮಾನಸಿಕವಾಗಿ ಆಘಾತಗೊಂಡಿದ್ದರು.
ದಿವಂಗತ ಸುರೇಶ ಅಂಗಡಿಯವರು ತಮ್ಮ ಊರಾದ ಕೆಕೆ ಕೊಪ್ಪದ ಶಾಲೆಗೆ ತಮ್ಮ ತಾಯಿಯ ಹೆಸರಲ್ಲಿ ಹಣ ನೀಡಿದ್ದರಿಂದ ಶಾಲೆ ಸೋಮವ್ವ ಅಂಗಡಿಯವರ ಹೆಸರು ಇಡಲಾಗಿತ್ತು.

 

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ

ನಿಮ್ಮ ಕಾಮೆಂಟ್ ಬರೆಯಿರಿ

advertisement