ಏ.೧ರಿಂದ ಕೇಂದ್ರದಿಂದ ಹೊಸ ವೇತನ ಸಂಹಿತೆ ಕಾಯ್ದೆ ಜಾರಿಗೆ: ವೇತನ, ಪಿಎಫ್, ಗ್ರಾಚ್ಯುಟಿಯಲ್ಲಿ ಬದಲಾವಣೆ 

ಚಿತ್ರ ಕೃಪೆ-ಇಂಟರ್ನೆಟ್‌

ನವ ದೆಹಲಿ : ಕೇಂದ್ರ ಸರ್ಕಾರ ಹೊಸ ವೇತನ ಸಂಹಿತೆ ಮಸೂದೆ 2021 ಅಥವಾ ಹೊಸ ಕಾರ್ಮಿಕ ಕಾನೂನು 2021ರ ಏಪ್ರಿಲ್ 1ರಿಂದ ಜಾರಿಗೆ ತರಲು ಮುಂದಾಗಿದೆ.
ಇದು ಜಾರಿಯಾದರೆ ಕೇಂದ್ರ ಸರ್ಕಾರಿ ನೌಕರರ ವೇತನ, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಮೇಲೆ ಪರಿಣಾಮ ಬೀರಲಿದೆ. ಹೊಸ ವೇತನ ಸಂಹಿತೆ ಮಸೂದೆ 2021 ನ್ನು ಜಾರಿಗೆ ತಂದ ನಂತರ, ಕೇಂದ್ರ ಸರ್ಕಾರಿ ನೌಕರರು ತಮ್ಮ ಅಧಿಕೃತ ಕೆಲಸದ ಸಮಯ, ಗ್ರಾಚ್ಯುಟಿ ಮತ್ತು ಭವಿಷ್ಯ ನಿಧಿ (ಪಿಎಫ್)ಯಲ್ಲಿ ಬದಲಾವಣೆ ಕಾಣುವ ಸಾಧ್ಯತೆ ಹೆಚ್ಚಿದೆ.
ತುಟ್ಟಿ ಭತ್ಯೆ (ಡಿಎ) ಹೆಚ್ಚಳ ಘೋಷಣೆಗಾಗಿ ಅನೇಕ ಕೇಂದ್ರ ಸರ್ಕಾರಿ ನೌಕರರು ಕಾಯುತ್ತಿರುವುದರಿಂದ, ಹೊಸ ವೇತನ ಸಂಹಿತೆ ಮಸೂದೆ 2021 ಜಾರಿಗೆ ಬಂದರೆ, ನೌಕರರಿಗೆ ಅನುಕೂಲಗಳು ಮತ್ತು ಅನನುಕೂಲತೆಗಳೆರಡೂ ಇರುವುದರಿಂದ ನೌಕರರಿಗೆ ಮಿಶ್ರ ಅನುಭವವಾಗಲಿದೆ. ವರದಿಗಳ ಪ್ರಕಾರ, ಭವಿಷ್ಯ ನಿಧಿಯಲ್ಲಿ ವಂತಿಗೆ ಹೆಚ್ಚಳವಾಗಲಿದ್ದು ಹೀಗಾಗಿ ಮನೆಗೆ ತರುವ ಸಂಬಳ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಸರ್ಕಾರವು ಪ್ರಸ್ತಾವನೆ ಮಾಡಿರುವ ಹೊಸ ವೇತನ ಸಂಹಿತೆ ಮಸೂದೆ 2021 ಜಾರಿಗೆ ಬಂದರೆ ನೌಕರರ ವೇತನದಲ್ಲಿ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ. ಹೊಸ ಮಸೂದೆ ಪ್ರಕಾರ, ನೌಕರರು ಒಂದು ವರ್ಷ ಕೆಲಸ ಮಾಡಿದ್ದರೂ ಗ್ರಾಚ್ಯುಟಿ ಪಡೆಯಲು ಅರ್ಹರಾಗಿರುತ್ತಾರೆ. ಈಗ ಅದೇ ಕಂಪನಿಯಲ್ಲಿ ಐದು ವರ್ಷಗಳ ಸತತ ಕೆಲಸ ಮಾಡಿದ ನಂತರ ನೌಕರರಿಗೆ ಗ್ರಾಚ್ಯುಟಿ ಸಿಗುತ್ತಿದೆ. ಹೊಸ ವೇತನ ಸಂಹಿತೆ 2021 ಜಾರಿಯಾದರೆ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ.
ಪಿಎಫ್‌ ವಂತಿಗೆ ಹೆಚ್ಚಳ: ಪ್ರಸ್ತುತ ನಿಯಮಗಳ ಪ್ರಕಾರ ಮೂಲ ವೇತನದ ಶೇ.12ರಷ್ಟು ಪಿಎಫ್ ಗೆ ಹೋಗುತ್ತದೆ. ಮೂಲ ವೇತನವು ಸಿಟಿಸಿಯ ಶೇ.50ರಷ್ಟು ಆದಾಗ, ಪಿಎಫ್ ನ ವಂತಿಗೆ ತಾನಾಗಿಯೇ ಹೆಚ್ಚುತ್ತದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

 

4 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement