ಕೊರೊನಾ ಲಸಿಕೆ : ಒಂದು ಡೋಸ್‌ʼಗೆ 200 ರೂಪಾಯಿಗಿಂತ ಕಮ್ಮಿಯಾಗುವ ಸಾಧ್ಯತೆ

ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲಾದ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ ಲಸಿಕೆಯ ಬೆಲೆಯನ್ನ ಮರು ಪರಿಷ್ಕರಣೆ ಮಾಡಲಾಗಿದೆ ಎಂದು ಒಕ್ಕೂಟದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಗುರುವಾರ ತಿಳಿಸಿದ್ದಾರೆ.
‘ಪ್ರತಿ ಡೋಸಿಗೆ ಗಣನೀಯವಾಗಿ ಕಡಿಮೆ ಇರುವ ಬೆಲೆಯನ್ನ ನಾವು ಮರು ಪರಿಷ್ಕರಣೆ ಮಾಡಿದ್ದೇವೆ’ ಎಂದು ಕಾರ್ಯದರ್ಶಿ ಹೊಸ ಬೆಲೆಯನ್ನು ಬಹಿರಂಗಪಡಿಸದೆ ಹೇಳಿದರು. ಆದರೆ, ಸರ್ಕಾರ ಲಸಿಕೆಗಳನ್ನ ಖರೀದಿಸುತ್ತಿರುವ ದರ ಇದಾಗಿದ್ದು, ಹೊಸ ಬೆಲೆ ಸುಮಾರು ₹157.50 ಎಂದು ವರದಿಗಳು ತಿಳಿಸಿವೆ.
ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಜನರು ಪಾವತಿಸುವ ಹಣದ ಮೇಲೆ ಇದು ಪರಿಣಾಮ ಬೀರುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. 45 ರಿಂದ 60 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮತ್ತು ಸಹ-ರೋಗಪೀಡಿತರು ಲಸಿಕೆಯನ್ನು ಪಡೆಯುತ್ತಿರುವ ಎರಡನೇ ಹಂತದಲ್ಲಿ, ಖಾಸಗಿ ಆಸ್ಪತ್ರೆಗಳು 250 ರೂ. ಶುಲ್ಕ ವಿಧಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಲಸಿಕೆಯ ಡೋಸ್ʼನ ಬೆಲೆಯನ್ನ 150ರೂ.ಗಳಿಗೆ ಇಳಿಸಲಾಗಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement