ಮಮತಾ ಗಾಯಗೊಂಡ ಘಟನೆ: ತನಿಖೆಗೆ ಒತ್ತಾಯಿಸಿ ಚುನಾವಣಾ ಆಯೋಗದ ಮುಂದೆ ಬಿಜೆಪಿ-ಟಿಎಂಸಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿಗಾಗ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಗೆ ಸಂಬಂಧಿಸಿದಂತೆ ಈಗ ಆಡಳಿತಾರೂಢ ತೃಣಮೂಲ್‌ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ದೊಡಡ್ಡ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ. ಬಿಜೆಪಿ ಮತ್ತು ಟಿಎಂಸಿ ಎರಡೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ಈ ಘಟನೆ ಬಗ್ಗೆ ಹೆಚ್ಚಿನ ತನಿಖೆಗೆ ಒತ್ತಾಯಿಸಿವೆ. ಜೊತೆಗೆ ಎರಡೂ ಪಕ್ಷಗಳು ಈಗ ಚುನಾವಣಾ ಆಯೋಗದ ಮುಂದೆ ಹೋಗಿವೆ…!
ತನ್ನ ಕಾರಿನ ಪಕ್ಕದಲ್ಲಿದ್ದಾಗ ತನ್ನ ಮೇಲೆ ಹಲ್ಲೆ ನಡೆಸಿ ತಳ್ಳಲಾಯಿತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರೆ ಇದು ಚುನಾವಣಾ ಸಮಯದ ಬೃಹನ್‌ ನಾಟಕ ಎಂದು ಬಿಜೆಪಿ ಹೇಳಿದೆ. ಬಿಜೆಪಿ ಪಕ್ಷದ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿನ ಕೆಲವು ಪೋಸ್ಟ್‌ಗಳು ಮಮತಾ “ಮೇಲಿನ ಹಲ್ಲೆಯನ್ನು ನಕಲಿ” ಎಂದು ಹೇಳಿವೆ.
ಈ ಮಧ್ಯೆ, ಹಲವಾರು ತೃಣಮೂಲ ಕಾಂಗ್ರೆಸ್ ನಾಯಕರು ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿದ್ದಾರೆ, ಮಮತಾ ಅವರ ಸೋದರಳಿಯ ಅಭಿಷೇಕ್ ತಮ್ಮ ಆಸ್ಪತ್ರೆಯ ಹಾಸಿಗೆಯಿಂದ ಮುಖ್ಯಮಂತ್ರಿಯವರ ಚಿತ್ರವನ್ನು ಟ್ವೀಟ್ ಮಾಡಿದ್ದಲ್ಲದೆ ಮುಂಬರುವ ಪಕ್ಷದ ವಿಜಯವನ್ನು ಘೋಷಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ನಾಮಪತ್ರ ಸಲ್ಲಿಸಿದ ದಿನ ನಾಂದಿಗ್ರಾಮದಲ್ಲಿ 4-5 ಜನರು ಅವರನ್ನು ಉದ್ದೇಶಪೂರ್ವಕವಾಗಿ ತಳ್ಳಿದರು ಮತ್ತು ಅವರ ಕಾಲಿಗೆ ತೀವ್ರವಾಗಿ ಗಾಯವಾಯಿತು. ಇದು ಚುನಾವಣೆ ಸಂದರ್ಭದ ಪಿತೂರಿ” ತೃಣಮೂಲ ಪಕ್ಷದ ಸಾಮಾಜಕ ಜಾಲತಾಣದ ಹ್ಯಾಂಡಲ್‌ಗಳು ಹೇಳಿವೆ.ಪಕ್ಷವು ಗುರುವಾರ ಚುನಾವಣೆ ಆಯೋಗದ ಮುಂದೆ ಈ ಇವಷಯವನ್ನು ಎತ್ತಲಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಪಾರ್ಥ ಚಟರ್ಜಿ ಹೇಳಿದ್ದಾರೆ. ಮಮತಾ ದಾಖಲಾದ ಆಸ್ಪತ್ರೆಯ ಹೊರಗಿನಿಂದ ಮಾತನಾಡಿದ ಟಿಎಂಸಿ ಪಕ್ಷದ ಮುಖಂಡರು “ಚುನಾವಣಾ ಆಯೋಗದ ಮುಂದೆ ಇಡಲು ಉದ್ದೇಶಿಸಿದ್ದಾರೆ” ಎಂದು ಹೇಳಿದರು.
ಅದೇ ಸಮಯದಲ್ಲಿ, ಬಿಜೆಪಿ ನಿಯೋಗ ಕೊಲ್ಕತ್ತಾದ ಚುನಾವಣಾ ಆಯೋಗವನ್ನು ಮಧ್ಯಾಹ್ನ 12:30 ಕ್ಕೆ ಭೇಟಿ ಮಾಡಲಿದೆ ಎಂದು ತಿಳಿಸಿದೆ. ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರದಲ್ಲಿ ಪಕ್ಷವು ಘಟನೆಯ ಬಗ್ಗೆ “ವಿವರವಾದ ವಿಚಾರಣೆ” ಕೋರಿದೆ. ಅಲ್ಲದೆ, ಉದ್ದೇಶಿತ ದಾಳಿಯ ವೀಡಿಯೊ ತುಣುಕನ್ನು ಸಾರ್ವಜನಿಕಗೊಳಿಸಬೇಕು ಎಂದು ಹೇಳಿದೆ.
ಈ ಮಧ್ಯೆ, ಕಾಂಗ್ರೆಸ್ ನಾಯಕರು ಈ ಘಟನೆ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದಾರೆ. ಕೆಲವರು ಇದು ಚುನಾವಣೆಗೆ ಮುಂಚಿತವಾಗಿ ನಡೆದ ನಾಟಕ ಎಂದು ಆರೋಪಿಸಿದರೆ, ಮತ್ತೆ ಕೆಲವರು ಘಟನೆಯನ್ನು ಖಂಡಿಸಿದ್ದಾರೆ.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement