ಮಮತಾ ಮೇಲೆ ಹಲ್ಲೆ ನಡೆದಿಲ್ಲ: ಪ್ರತ್ಯಕ್ಷದರ್ಶಿಗಳ ಹೇಳಿಕೆ

ಚಿತ್ರಕೃಪೆ: ಝೀ ನ್ಯೂಸ್‌

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣ ತೀವ್ರ ಕೋಲಾಹಲ ಸೃಷ್ಟಿಸಿದೆ.ಅದಕ್ಕೆ ಈಗ ಹೊಸ ತಿರುವೂ ಸಿಕ್ಕಿದೆ.
ಇಬ್ಬರು ಪ್ರತ್ಯಕ್ಷ ದರ್ಶಿಗಳ ಪ್ರಕಾರ ಕಾರಿ ಚಲಿಸಿದ್ದರಿಂದ ಅದು ತಾಗಿ ಮಮತಾ ಅವರಿಗೆ ಪೆಟ್ಟಾಗಿದೆ ಎಂದು ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದಯ ವರದಿ ಮಾಡಿದೆ.
ಮಮತಾ ಬ್ಯಾನರ್ಜಿ ಸ್ಥಳೀಯರೊಂದಿಗೆ ಮಾತನಾಡುವಾಗ ದುಷ್ಕರ್ಮಿಗಳು ಅವರನ್ನು ತಳ್ಳಾಡಿದ್ದಾರೆ. ಇದರಿಂದ ಮಮತಾ ಅವರ ಕಾಲಿಕೆ ಪೆಟ್ಟಾಗಿದೆ ಎಂದು ಆರೋಪಿಸಲಾಗಿದೆ. ಮಮತಾ ಬ್ಯಾನರ್ಜಿ ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಜಿದ್ದಾಜಿದ್ದಿನ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದರಿಂದ ಈಗ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಚುನಾವಣಾ ಪ್ರಚಾರದ ವೇಳೆ ನಾಲ್ಕೈದು ಜನರು ತಮ್ಮ ಮೇಲೆ ಹಲ್ಲೆ ನಡೆಸಿದ್ದರಿಂದ ಎಡಗಾಲಿಗೆ ಪೆಟ್ಟಾಗಿದೆ ಎಂದು ಮಮತಾ ಅವರು ಹೇಳಿದ್ದರು. ಬುಧವಾರ ಸಂಜೆ 6.15ರ ವೇಳೆಗೆ ಬಿರುಲಿಯಾದಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೊರಡುವಾಗ ಈ ಘಟನೆ ನಡೆದಿದ್ದು, ಆದರೆ, ಘಟನೆ ವೇಳೆ ಹಾಜರಿದ್ದ ಇಬ್ಬರು ಪ್ರತ್ಯಕ್ಷದರ್ಶಿಗಳು ಮಮತಾ ಬ್ಯಾನರ್ಜಿ ಅವರನ್ನು ಯಾರೂ ತಳ್ಳಾಡಿಲ್ಲ, ಹಲ್ಲೆ ನಡೆಸಿಲ್ಲ. ಸಣ್ಣದೊಂದು ಅಪಘಾತದಲ್ಲಿ ಅವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಅವರನ್ನು ನೋಡಲು ದೊಡ್ಡ ಗುಂಪು ಸೇರಿತ್ತು. ಅವರು ಹೊರಡುವಾಗ ಕೆಳಕ್ಕೆ ಬಿದ್ದು ಕುತ್ತಿಗೆ ಹಾಗೂ ಕಾಲಿಗೆ ಪೆಟ್ಟಾಯಿತು. ಆಕೆಯನ್ನು ನೋಡಲು ಜನರು ಸೇರಿದ್ದ ಸಮಯದಲ್ಲಿ ಕಾರೂ ನಿಧಾನವಾಗಿ ಚಲಿಸುತ್ತಿತ್ತು’ ಎಂದು ವಿದ್ಯಾರ್ಥಿ ಸುಮನ್ ಮೈತಿ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಹೋರ್ಡಿಂಗ್‌ನಿಂದಾದ ಅಪಘಾತ:
‘ಅಲ್ಲಿ ಏನಾಯಿತು ಎಂಬುದನ್ನು ನಾನು ನೋಡಿದ್ದೇನೆ. ದೇವಸ್ಥಾನದಿಂದ ಬಂದ ಮಮತಾ, ಬಾಗಿಲು ತೆರೆದು ಕಾರ್‌ನಲ್ಲಿ ಕುಳಿತುಕೊಂಡಿದ್ದರು. ಕಾರ್‌ನ ಮುಂಭಾಗದಲ್ಲಿ ಅಳವಡಿಸಿದ್ದ ಹೋರ್ಡಿಂಗ್ ಬಾಗಿಲಿನ ಮೇಲೆ ಬಿದ್ದಿದೆ. ಅದು ಮಮತಾ ಅವರ ಕುತ್ತಿಗೆ ಮತ್ತು ಕಾಲಿಗೆ ತಾಗಿದೆ. ಆಕೆಗೆ ಯಾರೂ ಹೊಡೆದಿಲ್ಲ’ ಎಂದು ಚಿತ್ತರಂಜನ್ ಎಂಬುವವರು ಸಹ ತಿಳಿಸಿದ್ದಾರೆ.
ಇದೊಂದು ಸಣ್ಣ ಅಪಘಾತ. ಅದನ್ನೇ ಅವರು ಪೂರ್ವ ನಿಯೋಜಿತ ಸಂಚು ಎಂಬಂತೆ ಬಿಂಬಿಸಿ ಗದ್ದಲವೆಬ್ಬಿಸಿದ್ದಾರೆ. ಅವರ ಸುತ್ತಲೂ 24 ತಾಸು ಸಾಕಷ್ಟು ಭದ್ರತಾ ಸಿಬ್ಬಂದಿ ಇರುತ್ತಾರೆ. ಹೀಗಿರುವಾಗ ಇದು ಹೀಗೆ ನಡೆಯಲು ಸಾಧ್ಯ ಎಂದು ಬಿಜೆಪಿ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಟೀಕಿಸಿದ್ದಾರೆ.
ಘಟನೆ ವರದಿಗೆ ಆಯೋಗ ಸೂಚನೆ:
ನಂದಿಗ್ರಾಮ ಮತಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರು ನಾಮಪತ್ರ ಸಲ್ಲಿಸಿದ ದಿನವೇ ಈ ಘಟನೆ ನಡೆದಿದ್ದು, ಈ ಕುರಿತು ತೃಣಮೂಲ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಘಟನೆ ಮತ್ತು ಭದ್ರತಾ ವೈಫಲ್ಯದ ಕುರಿತು ಸಂಪೂರ್ಣ ವರದಿ ನೀಡುವಂತೆ ಚುನಾವಣಾ ಆಯೋಗವು ಸ್ಥಳೀಯ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement