ರವನೀತ್ ಸಿಂಗ್ ಬಿಟ್ಟು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

ನವ ದೆಹಲಿ: ರವನೀತ್ ಸಿಂಗ್ ಬಿಟ್ಟು ಅವರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನನ್ನಾಗಿ ಗುರುವಾರ ನೇಮಕ ಮಾಡಲಾಗಿದೆ.
ಸಂಸತ್ ಬಜೆಟ್ ಅಧಿವೇಶನದಲ್ಲಿ ಅಧೀರ್ ರಂಜನ್ ಚೌಧುರಿ ಅವರ ಬದಲು ಬಿಟ್ಟು ಅವರು ಕಾಂಗ್ರೆಸ್ ಮುಖಂಡನಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಬಂಗಾಳದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧುರಿ ಅವರು ಮುಂದಿನ ಎರಡು ತಿಂಗಳು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ಗೌರವ್ ಗೊಗೊಯ್ ಅವರು ಕೂಡ ಅಸ್ಸಾಂ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ಕಾರಣ ಲೋಕಸಭೆಯಲ್ಲಿ ಪಕ್ಷದ ಉಸ್ತುವಾರಿಯನ್ನು ಬಿಟ್ಟು ವಹಿಸಿಕೊಳ್ಳಲಿದ್ದಾರೆ.
1995ರಲ್ಲಿ ಹತ್ಯೆಯಾದ ಪಂಜಾಬ್ ಮಾಜಿ ಸಿಎಂ ಬೀಯಾಂತ್‌ ಸಿಂಗ್ ಅವರ ಮೊಮ್ಮಗನಾಗಿರುವ 45 ವರ್ಷದ ರವನೀತ್ ಸಿಂಗ್ ಬಿಟ್ಟು, ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 2009ರಲ್ಲಿ ಆನಂದಪುರ್ ಸಾಹಿಬ್ ಹಾಗೂ 2014 ಹಾಗೂ 2019ರಲ್ಲಿ ಲುಧಿಯಾನದಿಂದ ಸಂಸತ್ ಸದಸ್ಯರಾಗಿ ಚುನಾಯಿತರಾಗಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement