ವಿಶ್ವದಲ್ಲಿ ಅತ್ಯಧಿಕ ಸಂಪತ್ತು ಹೆಚ್ಚಿಸಿಕೊಂಡ ಗೌತಮ ಅದಾನಿ

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಗಮನಾರ್ಹ ಮೈಲಿಗಲ್ಲು ಸಾಧಿಸಿದ್ದಾರೆ.
ಇತ್ತೀಚಿನ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ವಿಶ್ವದ ಅತ್ಯಧಿಕ ಸಂಪತ್ತನ್ನು ಹೆಚ್ಚಿಸಿದವರಲ್ಲಿ ಅವರು ಮೊದಲ ಸ್ತಾನದಲ್ಲಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕವು ಇಲ್ಲಿಯ ವರೆಗೆ 2021ರಲ್ಲಿ ಅದಾನಿ 16.2 ಶತಕೋಟಿ ಡಾಲರ್‌ ಮೊತ್ತ ಹೆಚ್ಚಿಸಿಕೊಂಡಿದ್ದು, ಅವರ ಒಟ್ಟು ನಿವ್ವಳ ಮೌಲ್ಯವನ್ನು 50 ಶತಕೋಟಿ ಬಂದಿದೆ. ತನ್ನ ಸಂಪತ್ತಿನ ಈ ಹೆಚ್ಚಳದಿಂದ ಅದಾನಿ ಈಗ ವಿಶ್ವದ 26 ನೇ ಶ್ರೀಮಂತ ವ್ಯಕ್ತಿ.
ಈ ವರ್ಷದ ಸಂಪತ್ತಿನ ಹೆಚ್ಚಳದ ದೃಷ್ಟಿಯಿಂದ ಅವರು ವಿಶ್ವದ ಇಬ್ಬರು ಶ್ರೀಮಂತ ವ್ಯಕ್ತಿಗಳಾದ ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರನ್ನುಹಿಂದಿಕ್ಕಿದ್ದಾರೆ. ಮಸ್ಕ್ ಇದುವರೆಗೆ ತನ್ನ ನಿವ್ವಳ ಮೌಲ್ಯಕ್ಕೆ 10.3 ಬಿಲಿಯನ್ ಡಾಲರ್‌ ಸೇರಿಸಿದ್ದರೆ, ಬೆಜೋಸ್ ಅವರ ನಿವ್ವಳ ಹಣ 7.59 ಬಿಲಿಯನ್ ಕುಸಿತ ಕಂಡಿದೆ.
ಸಾಂಕ್ರಾಮಿಕ ರೋಗದ ಮಧ್ಯೆ ಕಳೆದ ಒಂದು ವರ್ಷದಲ್ಲಿ ಹಲವಾರು ಅದಾನಿ ಕಂಪನಿಗಳ ಷೇರುಗಳು ಏರಿಕೆಯಾಗಿದ್ದು, ಅವರ ಸಂಪತ್ತನ್ನು ಹೆಚ್ಚಿಸಿದೆ. ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಕಳೆದ ಒಂದು ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ. ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯದ ಷೇರುಗಳ ಬೆಲೆ ಈ ಅವಧಿಯಲ್ಲಿ ಎರಡು ಪಟ್ಟು ಹೆಚ್ಚಾಗಿದೆ.ಅಮೆಜಾನ್ ಇಂಕ್ ಸಂಸ್ಥಾಪಕ ಜೆಫ್ ಬೆಜೋಸ್ 183 ಬಿಲಿಯನ್ ಡಾಲರ್‌ ನಿವ್ವಳ ಮೌಲ್ಯವನ್ನು ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಮತ್ತು ಎಲೋನ್ ಮಸ್ಕ್ 180 ಬಿಲಿಯನ್ ಡಾಲರ್‌ ನಿವ್ವಳ ಮೌಲ್ಯ ಹೊಂದಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ 84.8 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿರುವ ವಿಶ್ವದ 10 ನೇ ಶ್ರೀಮಂತ ವ್ಯಕ್ತಿ. ಇಲ್ಲಿಯ ವರೆಗೆ 2021ರಲ್ಲಿ ಅವರು 8.05 ಬಿಲಿಯನ್ ಸಂಪತ್ತನ್ನು ಸೇರಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಐಫೋನ್ 15 ಖರೀದಿಸಿದರೆ ಆರು ತಿಂಗಳು ಫ್ರೀ ಪ್ಲಾನ್ ಘೋಷಿಸಿದ ರಿಲಯನ್ಸ್ ಜಿಯೋ...

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

1 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement