ಕೋವಿಡ್ ಅಮೆರಿಕಕ್ಕೆ ಕಾಲಿಟ್ಟು 1 ವರ್ಷ: 1.9 ಟ್ರಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಪ್ರಕಟಿಸಿದ ಅಧ್ಯಕ್ಷ ಬೈಡನ್

ವಾಷಿಂಗ್ಟನ್: ಕೊರೊನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಮಾತನಾಡಿದ್ದಾರೆ. ಇದಕ್ಕೂ ಮುನ್ನ ಅವರು 1.9 ಟ್ರಿಲಿಯನ್ ಡಾಲರ್ ಗಳ ಆರ್ಥಿಕ ಪ್ರೋತ್ಸಾಹಕ ಮಸೂದೆಗೆ ಸಹಿ ಹಾಕಿದ್ದಾರೆ.
ಶ್ವೇತಭವನದ ಒವಲ್ ಕಚೇರಿಯಲ್ಲಿ ಆರ್ಥಿಕ ಪ್ರೋತ್ಸಾಹಕಕ್ಕೆ ಸಹಿ ಹಾಕಿದರು.ಅಮೆರಿಕ ಕಾಂಗ್ರೆಸ್ ಮಸೂದೆಗೆ ಅನುಮೋದನೆ ನೀಡಿತ್ತು. ನಿರುದ್ಯೋಗ ಸಮಸ್ಯೆ, ಸಾರ್ವಜನಿಕ ಆರೋಗ್ಯ ಮತ್ತು ಕೋವಿಡ್-19 ಲಸಿಕೆಗೆ ಹಣ ಸಂಗ್ರಹಕ್ಕೆ 1,400 ಡಾಲರ್ ಬಳಕೆಯಾಗಲಿದೆ.
ಕಾಂಗ್ರೆಸ್ ಎಲ್ಲಾ ರಿಪಬ್ಲಿಕನ್ ಸಂಸದರು ಈ ಮಸೂದೆಗೆ ವಿರೋಧಿಸಿದ್ದರೂ ಶೇಕಡಾ 60ರಷ್ಟು ಮಂದಿ ಅನುಮೋದಿಸಿರುವುದರಿಂದ ಅಧ್ಯಕ್ಷರು ಸಹಿ ಹಾಕಿದ್ದು ಇದಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿ ಸಹ ಶ್ಲಾಘಿಸಿದೆ.
ಈ ಮಸೂದೆ ದೇಶವನ್ನು ಪುನರ್ನಿರ್ಮಿಸಲು ಅವಕಾಶವನ್ನು ನೀಡುತ್ತದೆ ಎಂದು ನಂತರ ಅಧ್ಯಕ್ಷ ಬೈಡನ್ ಹೇಳಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement