ಸಿಡಿ ಹಗರಣದ ತನಿಖೆ ಶುರು: ಮೊದಲ ದಿನವೇ ಐವರ ವಿಚಾರಣೆ..!

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಕುರಿತಂತೆ ತನಿಖೆ ಶುಕ್ರವಾರದಿಂದ (ಮಾ.೧೨ರಿಂದ) ತನಿಖೆ ಆರಂಭಿಸಿರುವ ವಿಶೇಷ ತನಿಖಾ ತಂಡ ಎಸ್‌ಐಟಿ ಮೊದಲ ದಿನವೇ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಸೌಮೇಂದ್ರ ಮುಖರ್ಜಿಯವರ ನೇತೃತ್ವದ ತಂಡ, ಮೊದಲ ದಿನವೇ ತನಿಖೆ ಚುರುಕುಗೊಳಿಸಿದ್ದು, ಐವರನ್ನು ವಶಕ್ಕೆ ಪಡೆದು, ಪ್ರತ್ಯೇಕ ಸ್ಥಳಗಳಲ್ಲಿ ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನ ತನಿಖೆ ನಡೆಸುವ ಜವಾಬ್ದಾರಿಯನ್ನು ಎಸ್ ಐಟಿಗೆ ವಹಿಸಿತ್ತು. ಹಾಗೂ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದರು. ಸೌಮೇಂದ್ರ ಮುಖರ್ಜಿ ನೇತೃತ್ವದ ತಂಡವು, ಶುಕ್ರವಾರದಿಂದ ತನಿಖೆ ಆರಂಭಿಸಿದ್ದು, ಮೊದಲ ದಿನವೇ ವಿಜಯನಗರದಲ್ಲಿ ರೂಂ ಮಾಡಿಕೊಂಡು, ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿ ಹಾಗೂ ಆತನ ಜೊತೆಗಿದ್ದ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಅವರಲ್ಲಿ ಮೊದಲನೆಯವರು ದಿನೇಶ್ ಕಲ್ಲಹಳ್ಳಿಗೆ ಸಿಡಿ ಕೊಟ್ಟವರು, ಎರಡನೇಯ ವ್ಯಕ್ತಿ ಸಿಡಿ ಎಡಿಟ್ ಮಾಡಿದಾತ, ಮೂರನೇ ವ್ಯಕ್ತಿ ಸಿಡಿಗೆ ಸ್ಕ್ರಿಪ್ಟ್‌ ಬರೆದವರು ಎನ್ನಲಾಗಿದೆ. ನಾಲ್ಕನೆಯವರನ್ನು ಚಿಕ್ಕಮಗಳೂರಿನ ಅಲ್ದೂರಿನಲ್ಲಿ ವಶಕ್ಕೆ ಪಡೆಯಲಾಗಿದ್ದು, ಐದನೆಯವರು ದಿನೇಶ ಕಲ್ಲಹಳ್ಳಿಗೆ ಸಿಡಿ ಕೊಡಲು ಬಂದಿದ್ದ ಯುವತಿ, ಈಕೆ ರಾಮನಗರ ಮೂಲದವಳು ಎನ್ನಲಾಗಿದೆ.
ಬೆಂಗಳೂರಿನಿಂದಲೇ ರಷ್ಯಾ ಸರ್ವರ್ ಹ್ಯಾಕ್ ಮಾಡಿ ಇಲ್ಲಿಂದಲೇ ರಮೇಶ್ ಜಾರಕಿಹೊಳಿ ಸಿಡಿ ಅಪ್ ಲೋಡ್ ಮಾಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದ್ದು, ಆ ವ್ಯಕ್ತಿ ಕೂಡ ಕೂಡ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಅವರ ಪತ್ತೆಗಾಗಿಯೂ ಎಸ್ ಐಟಿ ಪೊಲೀಸರು ಬಲೆ ಬೀಸಿದ್ದಾರೆ. ಈ ಪ್ರಕರಣದ ಮಾಸ್ಟರ್‌ ಮೈಂಡ್‌ಗಳು ರಾಜ್ಯದಿಂದಲೇ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು
ಅವರನ್ನು ಹಿಡಿಯಲು ತಂಡ ಮಾಹಿತಿ ಕಲೆಹಾಕುತ್ತಿದೆ.

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

3.2 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement